ಕುಂದಾಪುರ : ನಿಮ್ಮ ನೆರವಿನ ನಿರೀಕ್ಷೆಯಲ್ಲಿದ್ದಾರೆ ಕೋಟೇಶ್ವರ ಗ್ರಾಮ ಪಂಚಾಯತ್ ಉದ್ಯೋಗಿ ವೆಂಕಟೇಶ್ ಗೊಲ್ಲ. ಬರೋಬ್ಬರಿ ಮೂವತ್ತಾರು ವರ್ಷದ ವೆಂಕಟೇಶ್ ಗೊಲ್ಲ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ.
ಪಂಚಾಯತ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತ ತನ್ನ ತಾಯಿಯೊಂದಿಗೆ ಬದುಕು ಕಟ್ಟಿಕೊಂಡಿದ್ದ ವೆಂಕಟೇಶ್ ತನ್ನ ತಾಯಿಗಾಗಿ, ಅವರ ಖುಷಿಗಾಗಿ ಕನಸಿನ ಗೋಪುರವನ್ನೇ ಕಟ್ಟಿಕೊಂಡವರು, ತಾನಾಯ್ತು ತನ್ನ ಶೃದ್ಧೆಯ ದುಡಿಮೆಯಾಯ್ತು ಎಂದು ಬದುಕಿದ್ದ ವೆಂಕಟೇಶ್ ಅವರ ಬದುಕಿಗೆ ಐದು ವರ್ಷಗಳ ಹಿಂದೆ ವಿಧಿ ಚಾಟಿ ಬೀಸಿದೆಮ ಹೌದು, ಕಿಡ್ನಿ ವೈಫಲ್ಯದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ ಅವರು. ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದು ಇಂದಿನವರೆಗೆ ಬರೋಬ್ಬರಿ 24 ಲಕ್ಷ ಹಣ ಸುರಿದು ಸೋತಾಗಿದೆ, ಅದರ ಸಾಲದ ಹೊರೆಯೂ ಹೆಗಲ ಮೇಲಿದೆ.
ವೆಂಕಟೇಶರ ತಾಯಿಗೆ ಮಗ ಪ್ರತಿನಿತ್ಯ ಸತ್ತು ಬದುಕುವುದನ್ನು ನೋಡುವ ದೌರ್ಭಾಗ್ಯ, ನೆನೆಯದ ದೇವರಿಲ್ಲ, ಹೊರದ ಹರಕೆಗಳಿಲ್ಲ ಹತ್ತಿ ಇಳಿಯದ ದೇವಾಲಯಗಳ ಮೆಟ್ಟಿಲಿಲ್ಲ…ಪಾಪ! ತಾಯಿ ಸಂಕಟ!

ಆದರೆ ತನ್ನ ಇಳೆಯ ವಯಸ್ಸಿನಲ್ಲೂ ವೆಂಕಟೇಶ್ ಅವರ ತಾಯಿ ವಿಧಿಯ ಇಚ್ಛೆಗೆ ಸವಾಲಾಗಿ ನಿಂತು ತನ್ನ ಒಂದು ಕಿಡ್ನಿ ಮಗನಿಗೆ ಧಾರೆ ಎರೆದು ಮಗನನ್ನ ಬದುಕಿಸಿಕೊಳ್ಳುತ್ತೇನೆಂಬ ಶಪಥ ತೊಟ್ಟಿದ್ದಾರೆ, ತನ್ನ ದೇಹವನ್ನೇ ಬಸಿದು ಮರುಜನ್ಮವಿಯ್ಯಲು ಮುಂದಾಗಿದ್ದಾರೆ, ಆದರೆ ದುರ್ವಿಧಿ ವೈದ್ಯಲೋಕದ ಈ ಪ್ರಕ್ರಿಯೆಗೂ 15 ಲಕ್ಷ ಹಣ ಖರ್ಚಾಗಬಹುದೆಂದು ವೈದ್ಯರು ಹೇಳಿದ್ದಾರೆ.
ಬನ್ನಿ ವೆಂಕಟೇಶರ ಈ ನೋವಲ್ಲಿ ಮತ್ತವರ ತಾಯಿಯ ಸಂಕಟದಲ್ಲಿ ನಾವು ಜೊತೆಯಾಗೋಣ, ನಮ್ಮ ನೂರು ಇನ್ನೂರು ರೂಪಾಯಿ ಹಣ ಆ ತಾಯಿಯ ಮಡಿಲು ತುಂಬಲಿ, ವೆಂಕಟೇಶ್ ಮತ್ತೆ ಮೊದಲಿನಂತಾಗಲಿ.
ಗೂಗಲ್ ಪೇ|ಫೋನ್ ಪೇ ನಂಬರ್ : ರಾಜು ಗೊಲ್ಲ : +91 99011 48323

