ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದಿಂದ ಧರೆಗುರುಳಿದ ಕಟ್ಟಡದ ಅವಶೇಷಗಳಡಿ ಇನ್ನೂ ಅನೇಕ ಮಂದಿ ಸಿಲುಕಿದ್ದಾರೆ. ರಕ್ಷಣಾ ತಂಡಗಳು ಕಾರ್ಯಚರಣೆ ನಡೆಸುತ್ತಿವೆ.
ಈ ನಡುವೆ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಕ್ಕ – ತಮ್ಮನ ಬಾಂಧವ್ಯವನ್ನು ಈ ಫೋಟೋ ಸಾರುತ್ತಿದ್ದು, ನೋವಿನಲ್ಲೂ ಮುಗ್ಧ ಮನಸ್ಸುಗಳ ಕಾಳಜಿ ಇಲ್ಲಿ ಕಂಡು ಬೆರಗಾಗಬೇಕಿದೆ.
ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಯುಎನ್ ಪ್ರತಿನಿಧಿ ಮೊಹಮದ್ ಸಫಾ ಹಂಚಿಕೊಂಡಿದ್ದಾರೆ. ಇದರಲ್ಲಿ ಅಕ್ಕ-ತಮ್ಮ 17 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿ ಸುರಕ್ಷಿತವಾಗಿ ಹೊರಬಂದಿದ್ದಾರೆ. ಫೋಟೋದಲ್ಲಿ ʻಅವಶೇಷಗಳಡಿ ಸಿಲುಕಿರುವ ತಮ್ಮನಿಗೆ ಅಪಾಯವಾಗದಂತೆ ಆತನ ಮೇಲೆ 7 ವರ್ಷದ ಅಕ್ಕ ತನ್ನ ಕೈ ಸಹಾಯದಿಂದ ರಕ್ಷಿಸುತ್ತಿರುವುದನ್ನು ನೋಡಬಹುದಾಗಿದೆ.

Endless admiration for this brave girl.pic.twitter.com/anliOTBsy1— Tedros Adhanom Ghebreyesus (@DrTedros) February 8, 2023
