ಮೂಡುಬೆಳ್ಳೆ : ಬೈಕ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕಲ್ಯಾದಲ್ಲಿ ನಡೆದಿದೆ.
ಹರೀಶ್ ನಾಯ್ಕ್ ಮೃತ ಬೈಕ್ ಸವಾರ.
ಗುರುವಾತ ಬೆಳ್ಳಿಗ್ಗೆ 6.50 ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಹರೀಶ್ ನಾಯ್ಕ್ ಉಡುಪಿಯಿಂದ ಕೆಲಸ ಮುಗಿಸಿ ಕುಂಟಾಡಿಯ ಕಲ್ಯಾರುವಿನ ಮನೆಗೆ ಬರುತ್ತಿದ್ದರು. ಈ ವೇಳೆ ಮೂಡುಬೆಳ್ಳೆ ಕ್ರಾಸ್ ಬಳಿ ರಾಂಗ್ ಸೈಡ್‌ನಿಂದ ಬಂದ ಪಿಕ್‌ಅಪ್ ಗುದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಹರೀಶ್ ನಾಯ್ಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Advertisement. Scroll to continue reading.

ಪಿಕಪ್ ಚಾಲಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೃತ ಹರೀಶ್ ನಾಯ್ಕ ಕುಂಟಾಡಿ ರಕ್ತೇಶ್ವರಿ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದರು. ತಂದೆ – ತಾಯಿ, ಪತ್ನಿ , 8 ತಿಂಗಳ ಮಗು ಸೇರಿ 2 ಮಕ್ಕಳನ್ನು ಅಗಲಿದ್ದಾರೆ.
Advertisement. Scroll to continue reading.

In this article:accident, diksoochi Tv, diksoochi udupi, Diksoochinews, kalya, moodubelle

Click to comment