ಆಂಧ್ರಪ್ರದೇಶ : ತೈಲಗಾರದ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ 7 ಮಂದಿ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದುರಂತ ಕಾಕಿನಡ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ವೆಚಂಗಿ ಕೃಷ್ಣ, ವೆಚಂಗಿ ನರಸಿಂಹಂ, ವೆಚಂಗಿ ಸಾಗರ್, ಕೊರತಡು ಬಾಬು, ಕರಿ ರಾಮ ರಾವ್, ಕಟ್ಟಮುರಿ ಜಗದೀಶ್, ಪ್ರಸಾದ್ ಎಂದು ಗುರುತಿಸಲಾಗಿದೆ.
ಅಂಬಟಿ ಸುಬ್ಬಣ್ಣಎಂಬ ತೈಲ ಕಾರ್ಖಾನೆಯಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಟ್ಯಾಂಕ್ ಸ್ವಚ್ಛಗೊಳಿಸಲು ಕಾರ್ಮಿಕರು ಒಬ್ಬೊಬ್ಬರಾಗಿ ಟ್ಯಾಂಕ್ ಒಳಗೆ ಇಳಿದಿದ್ದು ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
Advertisement. Scroll to continue reading.

ಮೃತ 7 ಮಂದಿ ಕಾರ್ಮಿಕರು ಕೂಡಾ ಕೇವಲ 10 ದಿನದ ಮೊದಲಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ತಿಳಿದುಬಂದಿದೆ.
ದುರಂತ ನಡೆದ ತೈಲ ಕಾರ್ಖಾನೆ, ಕಾರ್ಖಾನೆ ಕಾಯ್ದೆಯ ಅಡಿಯಲ್ಲಿ ಗುರುತಿಸಿಕೊಂಡಿಲ್ಲ. ಅಲ್ಲದೆ ಕಲುಷಿತವಾದ ಅನಿಲವನ್ನು ಸೇವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
Advertisement. Scroll to continue reading.

In this article:Andrapradesha, Diksoochi news, diksoochi Tv, diksoochi udupi, kakinada

Click to comment