Connect with us

Hi, what are you looking for?

Diksoochi News

ಕರಾವಳಿ

ಉಡುಪಿಗೂ ವಕ್ಕರಿಸಿದ ಮಂಗನ ಕಾಯಿಲೆ: ಒಂದು ಪ್ರಕರಣ ಪತ್ತೆ

0

ಉಡುಪಿ: ಮಂಗನ ಕಾಯಿಲೆ (ಕೆಎಫ್‌ಡಿ) ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಕ್ರವಾರ ಉಡುಪಿ‌ ಜಿಲ್ಲೆಯಲ್ಲೂ ಒಂದು ಪ್ರಕರಣ ವರದಿಯಾಗಿದೆ. ಇದು ಈ ವರ್ಷದಲ್ಲಿ ಕಂಡು ಬಂದ ಮೊದಲ ಪ್ರಕರಣವಾಗಿದೆ.

ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 58 ವರ್ಷದ ಮಹಿಳೆಗೆ ಮಂಗನ ಕಾಯಿಲೆ ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಹೇಗೆ ತಗಲಿತು ಎಂಬ ಬಗ್ಗೆ ಈ ಭಾಗದ ಆಸುಪಾಸಿನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕುಂದಾಪುರ ಭಾಗದಲ್ಲಿ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ. 2019ರಲ್ಲಿ ಒಂದು ಪ್ರಕರಣ ಕಂಡುಬಂದಿತ್ತು. ಆ ಬಳಿಕ ಯಾವುದೇ ಪ್ರಕರಣಗಳು ಕಂಡುಬಂದಿರಲಿಲ್ಲ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಐ. ಗಡಾದ್‌ ತಿಳಿಸಿದ್ದಾರೆ.

ಶುಕ್ರವಾರ ಶಿವಮೊಗ್ಗದಲ್ಲಿ 1, ಚಿಕ್ಕಮಗ ಳೂರು 4, ಉಡುಪಿಯಲ್ಲಿ 1 ಪಾಸಿಟಿವ್‌ ಬಂದಿದೆ. ಈವರೆಗೆ 117 ಮಂದಿಗೆ ಪಾಸಿಟಿವ್‌ ಬಂದಿದ್ದು, 82 ಮಂದಿ ಗುಣಮುಖರಾಗಿ ಮೂವರು ಮೃತ ಪಟ್ಟಿದ್ದಾರೆ. 19 ಸಕ್ರಿಯ ಪ್ರಕರಣಗಳಿವೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!