ಮಹಿಳೆಯೊಬ್ಬರು ಅಂಗಡಿಯ ಮುಂದೆ ಸ್ವಚ್ಛಗೊಳಿಸುತ್ತಿರುವ ವೇಳೆ ಆಕಸ್ಮಿಕವಾಗಿ ಮಹಿಳೆಯ ಬಟ್ಟೆ ಅಂಗಡಿಯ ಶಟರ್‌ಗೆ ಸಿಲುಕಿದೆ. ಅದೇ ಸಮಯದಲ್ಲಿ ಶಟರ್ ಮಿಷನ್ ಅಂಗಡಿ ತೆರೆಯಲು ಆನ್ ಆಗಿದ್ದು, ಮಹಿಳೆಯ ಸಮೇತ ಶಟರ್ ಮೇಲೆ ಹೋಗಿದೆ. ಮಹಿಳೆ ಶಟರ್ಹೆ ಸಿಲುಕಿ ನೇತಾಡುತ್ತಿರುವುದು ಅಂಗಡಿಯ ಮುಂಭಾಗದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಸ್ಟ್ರೇಲಿಯದ ಸೌತ್ ವೇಲ್ಸ್‌ನ ಪಾಂಟಿಪ್ರಿಡ್‌ನಲ್ಲಿರುವ ಬೆಸ್ಟ್ ಒನ್ ಆಫ್-ಲೈಸೆನ್ಸ್‌ನಲ್ಲಿ ಈ ಘಟನೆ ನಡೆದಿದೆ.
ತಕ್ಷಣ ಮಹಿಳೆಯ ಕಿರುಚಾಟದ ಸದ್ದು ಕೇಳಿ ಅಂಗಡಿಯ ಮಾಲೀಕ ಓಡೋಡಿ ಬಂದು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಬಳಿಕ ಅಂಗಡಿಯ ಮಾಲೀಕ ಶಟರ್ ಅನ್ನು ಕೆಳಗಡೆ ಎಳೆದಿದ್ದಾರೆ. ಬಳಿಕ ಮಹಿಳೆಯನ್ನು ಎತ್ತಿ ಕೆಳಗೆ ಇಳಿಸಲಾಗಿದೆ.
Advertisement. Scroll to continue reading.
ಅದೃಷ್ಟವಶಾತ್ ಘಟನೆಯಲ್ಲಿ ಆಕೆಗೆ ಯಾವುದೇ ಗಾಯಗಳಾಗಿಲ್ಲ. ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.ಅಂಗಡಿಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ.
In this article:Australia, Diksoochi news, shutter, viral video, ಆಸ್ಟ್ರೇಲಿಯಾ, ವೈರಲ್ ವೀಡಿಯೋ, ಶಟರ್
Click to comment