ಶಿವಮೊಗ್ಗ: ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನವಾದ ಫೆ.27ರಂದು ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಒಂದು ವಾರ ಮುಂಚಿತವಾಗಿ ನೂತನ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ಮತ್ತು ಲ್ಯಾಂಡಿಂಗ್ ಕೂಡ ಯಶಸ್ವಿ ಆಗಿದೆ.
ಉದ್ಘಾಟನಾ ಕಾರ್ಯಕ್ರಮದ ಮೊದಲು ಪ್ರಾಯೋಗಿಕವಾಗಿ ನಡೆಸಲಾದ ವಿಮಾನ ಹಾರಾಟ ಯಶಸ್ವಿ ಆಗಿದೆ. ವಿಮಾನ ನಿಲ್ದಾಣಕ್ಕೆ ದೇಶದ ಭದ್ರತಾಪಡೆಯ ಸಿಬ್ಬಂದಿಯನ್ನು ಹೊತ್ತಿದ್ದ ವಿಮಾನವು ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ.
ಹೀಗಾಗಿ, ಉದ್ಘಾಟನೆ ಕಾರ್ಯಕ್ರಮದ ಒಂದು ವಾರದ ಮುನ್ನವೇ ಪ್ರಾಯೋಗಿಕ ವಿಮಾನ ಹಾರಾಟವನ್ನು ಆರಂಭಿಸಲಾಗಿದೆ. ಈ ವೇಳೆ ಯಾವುದೇ ಅವಘಡಗಳು ಹಾಗೂ ದುರಸ್ತಿ ಮಾಡುವ ಕಾರ್ಯಗಳು ಬಾಕಿ ಇದ್ದರೂ ಅವುಗಳನ್ನು ಸರಿಪಡಿಸಲಾಗುತ್ತದೆ. ಆದರೆ, ಭದ್ರತಾಪಡೆಯ ವಿಮಾನ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಹೀಗಾಗಿ ಅಂತಿಮ ಸಿದ್ಧತೆಗಳು ಕೂಡ ನಡೆಯುತ್ತಿವೆ.
Advertisement. Scroll to continue reading.

In this article:Airport, Diksoochi news, diksoochi udupi, diksoochitv, PM Modi, Shivamogga, ಪ್ರಧಾನಿ ಮೋದಿ, ಶಿವಮೊಗ್ಗ

Click to comment