Connect with us

Hi, what are you looking for?

ಕ್ರೀಡೆ

ಕೊಪ್ಪ ಟ್ರೋಫಿ 2023 ಕರಾಟೆ ಚಾಂಪಿಯನ್ಶಿಪ್ : ಉಡುಪಿಯ ರಿಯಾ ಜಿ.ಶೆಟ್ಟಿಗೆ ಚಿನ್ನದ ಪದಕ

0

ಉಡುಪಿ : ಕೊಪ್ಪದಲ್ಲಿ ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಕೊಪ್ಪ ಟ್ರೋಫಿ 2023 ಕರಾಟೆ ಚಾಂಪಿಯನ್ಶಿಪ್ ನಲ್ಲಿ ಪಿಕೆಸಿ ತಂಡದ ಸದಸ್ಯೆ, ಉಡುಪಿ ಒಳಕಾಡು ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ರಿಯಾ ಜಿ ಶೆಟ್ಟಿ ಪ್ರಥಮ ಸ್ಥಾನ, ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ಕರಾಟೆ ತರಬೇತುದಾರೆ ಪರ್ಕಳದ ಪ್ರವೀಣಾ ಡಿ ಸುವರ್ಣ ಅವರಲ್ಲಿ ತರಬೇತಿ ಪಡೆಯುತ್ತಿರುವ ರಿಯಾ ಜಿ.ಶೆಟ್ಟಿ ಸತತ ಐದು ಬಾರಿ ರಾಜ್ಯಮಟ್ಟದಲ್ಲಿ ಚಿನ್ನದ ಪದಕ, ಸತತ ನಾಲ್ಕು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಚಿನ್ನದ ಪದಕ ಪಡೆದು ಕೊಂಡಿದ್ದಾರೆ.
ಇವರು ಹಾವಂಜೆಯ ಕೀಳಂಜೆಯ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಹಾಗೂ ಜಯಲಕ್ಷ್ಮಿ ಅವರ ಪುತ್ರಿಯಾಗಿದ್ದಾಳೆ.

Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

1 ಬೆಂಗಳೂರು‌ : 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದೆ. ಮುಂದಿನ ತಿಂಗಳು ಅಕ್ಟೋಬರ್ 05ರಿಂದ ನವೆಂಬರ್ 19ರವರೆಗೆ ವಿಶ್ವಕಪ್ ಟೂರ್ನಿಯು ಭಾರತದ  10 ವಿವಿಧ ಸ್ಟೇಡಿಯಂನಲ್ಲಿ ಜರುಗಲಿದೆ....

ಕರಾವಳಿ

1 ಬೆಂಗಳೂರು : ಗಣೇಶ ಚತುರ್ಥಿ ಹಿನ್ನೆಲೆ ರಾಜ್ಯದಾದ್ಯಂತ ಸೆಪ್ಟಂಬರ್‌ 18 ರಂದು ಸಾರ್ವತ್ರಿಕ ರಜೆ ಇರಲಿದೆ. ಆದರೆ, ಕರಾವಳಿ ಭಾಗದಲ್ಲಿ ಸೆಪ್ಟಂಬರ್‌ 19 ರಂದು ಗಣೇಶನ ಹಬ್ಬವನ್ನು ಆಚರಿಸಲಾಗುವುದು. ಹೀಗಾಗಿ, ಗಣೇಶ...

ರಾಷ್ಟ್ರೀಯ

0 ನವದೆಹಲಿ : ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಎರಡು ದಿನಗಳ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ದೆಹಲಿಗೆ ಬಂದಿಳಿದಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್...

ರಾಷ್ಟ್ರೀಯ

1 ಬೆಂಗಳೂರು : ಪ್ರಗ್ಯಾನ್ ರೋವರ್‌ನಲ್ಲಿನ ನ್ಯಾವಿಗೇಷನ್ ಕ್ಯಾಮೆರಾ ಸೆರೆಹಿಡಿದ ಚಂದ್ರನ ಮೇಲಿನ ವಿಕ್ರಮ್ ಲ್ಯಾಂಡರ್‌ನ “ಅನಗ್ಲಿಫ್”ನ್ನು ಇಸ್ರೋ ಹಂಚಿಕೊಂಡಿದೆ. ಕ್ಯಾಮೆರಾ ವಿಕ್ರಮ್‌ನ ಚಿತ್ರಗಳನ್ನು ಎಡ ಮತ್ತು ಬಲ ದಿಕ್ಕುಗಳಲ್ಲಿ ಸೆರೆಹಿಡಿದಿದೆ. ಒಟ್ಟಾಗಿ,...