ಬಿಹಾರ : ಹಾರ ಬದಲಾಯಿಸಿಕೊಳ್ಳುತ್ತಿದ್ದ ವೇಳೆ ಡಿಜೆ ಶಬ್ದದಿಂದ ಅಸ್ವಸ್ಥಗೊಂಡ ವರ ಮದುವೆ ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ.
ಸುರೇಂದ್ರ ಕುಮಾರ್ ಮೃತ ವ್ಯಕ್ತಿ.
ಬುಧವಾರ ಸುರೇಂದ್ರ ಮತ್ತು ವಧು ಇಬ್ಬರೂ ಮದುವೆಗೆ ಸಿದ್ಧಪಡಿಸಲಾದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಂಪತಿಗಳು ಹಾರ ಬದಲಾಯಿಸಿಕೊಳ್ಳುತ್ತಿದ್ದ ಸಮಯದಲ್ಲಿ ಸುರೇಂದ್ರ ವೇದಿಕೆಯ ಮೇಲೆ ಕುಸಿದುಬಿದ್ದರು.
Advertisement. Scroll to continue reading.

ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ದಾರಿ ಮಧ್ಯೆದಲ್ಲಿಯೇ ವರ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.
ವರದಿಯ ಪ್ರಕಾರ, ಸುರೇಂದ್ರ ಅವರು ತಮ್ಮ ಮದುವೆಯ ಮೆರವಣಿಗೆಯಲ್ಲಿ ಹಾಕಿದ್ದ ಡಿಜೆಯ ದೊಡ್ಡ ಶಬ್ದದ ಬಗ್ಗೆ ಪದೇ ಪದೇ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದರು ಎನ್ನಲಾಗಿದೆ.
Advertisement. Scroll to continue reading.

In this article:Bihara, Diksoochi news, diksoochi Tv, diksoochi udupi, groom death, ವರ ಸಾವು

Click to comment