ಹಾವು ಕಂಡರೆ ಎಲ್ಲರಿಗೂ ಸಹಜವಾಗೇ ಭಯವಾಗುತ್ತೆ. ಹಾವು ಕಂಡರೆ ಓಡಿ ಹೋಗೋರೆ ಹೆಚ್ಚು. ಆದರೆ ಇಲ್ಲೊಬ್ಬ ಯುವತಿ ಹೆಬ್ಬಾವನ್ನೇ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಆಡುತ್ತಿರುವ ವಿಡಿಯೋವೊಂದು ವೈರಲ್ ಆಗ್ತಿದೆ.
ವಿಡಿಯೋವನ್ನು @WowTerrifying ಎಂಬ ಟ್ಟಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ 10 ಸೆಕೆಂಡುಗಳ ವಿಡಿಯೋದಲ್ಲಿ ಯುವತಿಯೋರ್ವಳು ಬಾಗಿಲಲ್ಲಿ ಕುಳಿತಿರುವುದನ್ನು ನೋಡಬಹುದು. ಫೋನ್‌ನಲ್ಲಿ ಏನನ್ನೋ ನೋಡುತ್ತಿದ್ದಾಳೆ. ಇದರ ಜೊತೆಗೆ ಹೆಬ್ಬಾವು ಆಕೆಯ ಮಡಿಲಿನಲ್ಲಿ ಹರಿದಾಡುತ್ತಿರುವುದುನನ್ನು ಕಾಣಬಹುದು.
ಇನ್ನು ವಿಡಿಯೋವನ್ನು ಕಂಡ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ಅದ್ಭುತ ಎಂದು ಕರೆದರೆ, ಮತ್ತೆ ಕೆಲವರು ಅಚ್ಚರಿ, ಭಯವನ್ನು ವ್ಯಕ್ತಪಡಿಸಿದ್ದಾರೆ.
Advertisement. Scroll to continue reading.

I'm your friend…. for now pic.twitter.com/UCz1G11MFP— Wow Terrifying (@WowTerrifying) March 3, 2023
In this article:Diksoochi news, diksoochi Tv, diksoochi udupi, viral video, ಹೆಬ್ಬಾವು

Click to comment