ನವದೆಹಲಿ : ಕಾಡಿನರಾಜ ಸಿಂಹ ಎಂದರೆ ಇತರೆ ವನ್ಯ ಜೀವಿಗಳಿಗೆ ಭಯ. ಅದನ್ನು ಎದುರು ಹಾಕಿಕೊಳ್ಳುವ ಧೈರ್ಯವನ್ನು ಯಾವುದೇ ಪ್ರಾಣಿಗಳೂ ಮಾಡುವುದಿಲ್ಲ. ಆದರೆ ಕೆಲವೊಮ್ಮೆ ಸಿಂಹ, ಹುಲಿ, ಚಿರತೆಯನ್ನು ಸಾಮಾನ್ಯ ವನ್ಯ ಮೃಗಗಳು ಅಟ್ಟಾಡಿಸುವ ವೀಡಿಯೋಗಳು ವೈರಲ್ ಆಗುತ್ತವೆ. ಇದೀಗ ಅದಕ್ಕೊಂದು ಸೇರ್ಪಡೆ ಎಂಬಂತೆ ಸರೋವರದ ಬಳಿ ನೀರು ಕುಡಿಯಲು ಬಂದ ಸಿಂಹವನ್ನು ನೀರಾನೆ ಹಿಮ್ಮೆಟ್ಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಂಹವೊಂದು ನಿಧಾನಕ್ಕೆ ಹೆಜ್ಜೆ ಇಡುತ್ತಾ ಸರೋವರದ ನೀರು ಕುಡಿಯಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಅದೇ ಸರೋವರದಲ್ಲಿ ಮೂರು ನೀರಾನೆಗಳು ಇದ್ದವು. ಅದರಲ್ಲಿ ದೊಡ್ಡ ನೀರು ಕುದುರೆ ಸಿಂಹವನ್ನೇ ನೋಡುತ್ತಿದ್ದು, ಏಕಾಏಕಿ ಸಿಂಹದತ್ತ ಮುನ್ನುಗ್ಗಿದೆ. ಇದರಿಂದ ಹೆದರಿದ ಸಿಂಹ ಓಡಿದೆ. ಸದ್ಯ ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, hippo, lion, ನೀರಾನೆ, ಸಿಂಹ

Click to comment