ರಾಯಚೂರು : ಮನೆಯೊಂದರಲ್ಲಿ ಎಸಿ ಸ್ಪೋಟಗೊಂಡು ತಾಯಿ ಹಾಗೂ ಇಬ್ಬರು ಮಕ್ಕಳು ಸಜೀವವಾಗಿ ದಹನವಾಗಿರೋ ಘಟನೆ ನಡೆದಿದೆ.
ಶಕ್ತಿನಗರದಲ್ಲಿರುವ ಆರ್ ಟಿ ಪಿಎಸ್ ಎಇಇ ಸಿದ್ದಲಿಂಗಯ್ಯ ಸ್ವಾಮಿ ಎಂಬುವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.
ಪತ್ನಿ ರಂಜಿತಾ (33) ಹಾಗೂ ಇಬ್ಬರು ಮಕ್ಕಳಾದ ಮೈದಲ್ (13), ತಾರುಣ್ಯ (5) ಸಜೀವ ದಹನವಾದವರು.
Advertisement. Scroll to continue reading.

ಆರ್ ಟಿ ಪಿಎಸ್ ಎಇಇ ಸಿದ್ಧಲಿಂಗಯ್ಯ ಸ್ವಾಮಿ ಮಂಡ್ಯ ಮೂಲದವರು ಎಂದು ತಿಳಿದು ಬಂದಿದೆ. ರಾಯಚೂರಿನಲ್ಲಿ ಎಇಇಯಾಗಿ ಆರ್ ಟಿ ಪಿಎಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಎಸಿ ಸ್ಪೋಟಗೊಂಡ ಕಾರಣ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.

In this article:AC Blast, Diksoochi news, diksoochi Tv, diksoochi udupi, Featured, Raichur

Click to comment