ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಕೋಲಾರ: ಮುದುವಾಡಿ ಬಳಿಯ ತೊಂಡಾಲ ಗ್ರಾಮದ ಕೆರೆಯಲ್ಲಿ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಸುಟ್ಟುಹೋದ ಸ್ಥಿತಿಯಲ್ಲಿದ್ದ ದೇಹದಲ್ಲಿ ಮಾಂಗಲ್ಯ ಸರ ಪತ್ತೆಯಾಗಿದ್ದು, ಮೃತದೇಹ ಮಹಿಳೆಯದ್ದೇ ಎಂಬುದು ಗೊತ್ತಾಗಿದೆ.
ಮೃತದೇಹ ಶ್ರೀನಿವಾಸಪುರದ ಮಹಿಳೆ ಶೋಭಾ (37) ಅವರದ್ದೆಂದು ಗುರುತಿಸಲಾಗಿದೆ. ಕಿಡಿಗೇಡಿಗಳು ಮಹಿಳೆಯನ್ನ ಕೊಲೆ ಮಾಡಿ, ಸುಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
Advertisement. Scroll to continue reading.


ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಹಿಳೆಯ ಗುರುತು ಪತ್ತೆಯಾಗಿದೆ. ಇಲ್ಲಿನ ನಿವಾಸಿ ವೆಂಕಟರಮಣ ಈಕೆಯನ್ನ 2ನೇ ಮದುವೆಯಾಗಿದ್ದ. ಮೃತ ಮಹಿಳೆ ಶೋಭಾ ಶ್ರೀನಿವಾಸಪುರದಲ್ಲೇ ಬ್ಯೂಟಿಪಾರ್ಲರ್ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
In this article:Diksoochi news, diksoochi Tv, diksoochi udupi, kolar, Kolar Rural Police, women's body found

Click to comment