ಆನೆಯೊಂದು ಕಬ್ಬನ್ನು ತಿನ್ನಲು ಲೋಡ್ ಮಾಡಿದ ಟ್ರಕ್ ಅನ್ನು ಸಲ್ಲಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಟ್ವಿಟ್ಟರ್‌ನಲ್ಲಿ ಡಾ ಅಜಯಿತ ಎಂಬುವವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹೆದ್ದಾರಿಯ ಬದಿಯಲ್ಲಿ ನಿಂತಿದ್ದ ಆನೆಯನ್ನು ನೋಡಬಹುದು. ಕಬ್ಬು ತುಂಬಿದ ಟ್ರಕ್ ಸಮೀಪಿಸುತ್ತಿದ್ದಂತೆ ಅಡ್ಡ ಹಾಕಿ ಕಬ್ಬನ್ನು ತಿನ್ನಲು ಮುಂದಾಗುತ್ತದೆ. ಬಳಿಕ ಟ್ರಕ್ ನಿಂದ ಸ್ವಲ್ಪ ಪ್ರಮಾಣದ ಕಬ್ಬನ್ನು ಹೊರ ತೆಗೆದು ತಿನ್ನುತ್ತದೆ.
ವಿಡಿಯೋದಲ್ಲಿ ಆನೆ ನಿಂತಿರುವ ಫಲಕವು ಥಾಯ್ಲೆಂಡ್‌ನಲ್ಲಿ ಎಲ್ಲೋ ನಡೆದ ಘಟನೆಯನ್ನು ಸೂಚಿಸುತ್ತದೆ.
Advertisement. Scroll to continue reading.

ಇನ್ನು ವಿಡಿಯೋ ಸಕತ್ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದು, ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಹೊಸ ತೆರಿಗೆ ಸಂಗ್ರಹಕ, ಟ್ಯಾಕ್ಸ್ ಕಲೆಕ್ಟರ್ ಎಂದು ಹೇಳಿದ್ದಾರೆ.
In this article:Diksoochi news, diksoochi Tv, diksoochi udupi, elephant, suger cane lory, viral video

Click to comment