Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯ ರಾಜಕೀಯ: ಭಾರತ ಯಾರಿಗೆ ಶತ್ರು, ಯಾರಿಗೆ ಮಿತ್ರ? ಇಲ್ಲಿದೆ ಇಂಟ್ರೆಸ್ಟಿಂಗ್ ಸರ್ವೆ

1

ನವದೆಹಲಿ: ಅಂತಾರಾಷ್ಟ್ರೀಯ ರಾಜಕೀಯ/ ಸಂಬಂಧ ಬಹಳ ಸಂಕೀರ್ಣವಾದುದು. ಕಷ್ಟದ ಕಾಲಕ್ಕೆ ಯಾರು ಮಿತ್ರರಾಗುತ್ತಾರೆ, ಯಾರು ಶತ್ರುವಾಗುತ್ತಾರೆ ಎಂದು ಹೇಳುವುದು ಕಷ್ಟ. ಪ್ರತಿಯೊಂದು ದೇಶವು ತನ್ನ ಲಾಭಕ್ಕಾಗಿ ಮಾತ್ರ ಇನ್ನೊಂದು ದೇಶವನ್ನು ತನ್ನ ಮಿತ್ರನನ್ನಾಗಿಸುತ್ತವೆ. ಆದ್ದರಿಂದ ಅಂತಾರಾಷ್ಟ್ರೀಯ ರಾಜಕೀಯ/ಸಂಬಂಧದಲ್ಲಿ ಇನ್ನೊಂದು ದೇಶದೊಂದಿಗೆ ತೀರ ಅವಲಂಬನೆ ಸುಖಕರವಲ್ಲ.

ಉಕ್ರೇನ್ ದೇಶದ ಮೇಲೆ ರಷ್ಯಾ ಆಕ್ರಮಣ ಮಾಡಿದಾಗ ಪಶ್ಚಿಮ ದೇಶಗಳು ನೆರವಿಗೆ ಬಂದವು. ರಷ್ಯಾಗೆ ಉಕ್ರೇಜ್ ಸುಲಭ ತುತ್ತಾಗದಂತೆ ಮಿತ್ರದೇಶಗಳು ಸಹಾಯ ಮಾಡಿವೆ.

ಇರಾಕ್ ಮೇಲೆ ಅಮೆರಿಕದ ಯುದ್ಧ ಮಾಡಿದಾಗ ಯಾವ ಇರಾಕ್‌ಗೆ ಯಾವ ದೇಶಗಳೂ ನೆರವಿಗೆ ಬರಲಿಲ್ಲ. ಭಾರತದ ಗಡಿ ಭಾಗದಲ್ಲಿ ಚೀನಾ ದಾಳಿ ಮಾಡಿ ಒಂದಷ್ಟು ಪ್ರದೇಶವನ್ನು ಕಿತ್ತುಕೊಂಡಾಗಲೂ ಯಾವ ದೇಶ ಭಾರತದ ಸಹಾಯಕ್ಕೆ ಬರಲಿಲ್ಲ. ಅಂತಾರಾಷ್ಟ್ರೀಯ ರಾಜಕೀಯ ಎಂಬುದು ಬಹಳ ಸೂಕ್ಷ್ಮವಾಗಿರುವ ಮತ್ತು ಸಂಕೀರ್ಣವಾಗಿರುವ ಒಂದು ವ್ಯವಸ್ಥೆ. ಈ ವಿಚಾರದಲ್ಲಿ ಸಮೀಕ್ಷೆಯೊಂದು ಕುತೂಹಲ ಮೂಡಿಸುವ ಕೆಲ ಅಂಶಗಳನ್ನು ಹೊರತೆಗೆದಿದೆ. ಇಸಿಎಫ್ಆರ್ ಸಮೀಕ್ಷೆಯಲ್ಲಿ ಭಾರತೀಯರು ಯಾರನ್ನು ಮಿತ್ರನಾಗಿ ನೋಡುತ್ತಾರೆ, ಶತ್ರು, ಸಹವರ್ತಿ, ಪ್ರತಿಸ್ಪರ್ಧಿಯಾಗಿ ನೋಡುತ್ತಾರೆ ಎಂಬುದನ್ನು ತೋರಿಸಲಾಗಿದೆ. ಹಾಗೆಯೇ, ಭಾರತದ ಬಗ್ಗೆ ಈ ದೇಶಗಳು ಯಾವ ಅಭಿಪ್ರಾಯ ಹೊಂದಿವೆ ಎನ್ನುವುದೂ ಕೂಡ ಇದರಲ್ಲಿದೆ.

Advertisement. Scroll to continue reading.

ರಷ್ಯಾ, ಅಮೆರಿಕ, ಯೂರೋಪ್, ಬ್ರಿಟನ್, ಟರ್ಕಿ ಮತ್ತು ಚೀನಾ ದೇಶಗಳನ್ನು ಸಮೀಕ್ಷೆಗೆ ಆಯ್ದುಕೊಳ್ಳಲಾಗಿದೆ. ಕುತೂಹಲ ಎಂದರೆ, ಈ ದೇಶಗಳನ್ನು ಭಾರತೀಯರು ನೋಡುವ ರೀತಿಗೂ, ಆ ದೇಶಗಳ ಜನರು ಭಾರತವನ್ನು ನೋಡುವ ರೀತಿಗೂ ಪ್ರಮುಖ ವ್ಯತ್ಯಾಸ ಗೋಚರವಾಗುತ್ತದೆ.

ಚೀನಾ ಮತ್ತು ಭಾರತದ ಮಧ್ಯೆ ಈ ವೈರುದ್ಧ್ಯ

ಈ ಸಮೀಕ್ಷೆ ಪ್ರಕಾರ ಶೇ. 5ರಷ್ಟು ಭಾರತೀಯರು ಮಾತ್ರ ಚೀನಾವನ್ನು ಮಿತ್ರದೇಶವಾಗಿ ನೋಡುತ್ತಾರೆ. ಶೇ. 39ರಷ್ಟು ಜನರು ಶತ್ರುವಾಗಿ ಕಾಣುತ್ತಾರೆ. ಶೇ. 37ರಷ್ಟು ಜನರಿಗೆ ಭಾರತಕ್ಕೆ ಚೀನಾ ಪ್ರತಿಸ್ಪರ್ಧಿಯಾಗಿ ತೋರುತ್ತದೆ. ಶೇ. 17ರಷ್ಟು ಜನರು ಭಾರತ ಮತ್ತು ಚೀನಾ ಪಾರ್ಟ್ನರ್ ಆಗಬಹುದು ಎಂದು ಭಾವಿಸುತ್ತಾರೆ.

ಅದೇ ಚೀನೀಯರಿಗೆ ಭಾರತದ ಬಗ್ಗೆ ಏನಿದೆ ಅಭಿಪ್ರಾಯ? ಶೇ. 13ರಷ್ಟು ಚೀನೀಯರು ಭಾರತವನ್ನು ಶತ್ರುವಾಗಿ ಕಾಣುತ್ತಾರೆ. ಶೇ. 37ರಷ್ಟು ಮಂದಿಗೆ ಭಾರತ ಪ್ರತಿಸ್ಪರ್ಧಿಯಾಗಿ ಕಾಣುತ್ತದೆ. ಆದರೆ, ಶೇ. 14ರಷ್ಟು ಚೀನೀಯರು ಭಾರತವನ್ನು ಮಿತ್ರ ದೇಶವನ್ನಾಗಿ ಕಾಣುತ್ತಾರೆ. ಶೇ. 31ರಷ್ಟು ಜನರು ಭಾರತ ಮತ್ತು ಚೀನಾ ಸಹಕಾರದಲ್ಲಿ ಮುನ್ನಡೆಯಬಹುದು ಎಂದು ಭಾವಿಸುತ್ತಾರೆ.

ಸಮೀಕ್ಷೆ ಮಾಡಲಾದ ಆರು ದೇಶಗಳ ಪೈಕಿ ಭಾರತಕ್ಕೆ ಅತಿಹೆಚ್ಚು ಸ್ನೇಹ ಎನಿಸುವುದು ರಷ್ಯಾದ ಮೇಲೆ. ಶೇ. 51ರಷ್ಟು ಭಾರತೀಯರಿಗೆ ರಷ್ಯಾ ಸ್ನೇಹ ರಾಷ್ಟ್ರವಾಗಿದೆ. ಅಮೆರಿಕ, ಯೂರೋಪಿಯನ್ ಯೂನಿಯನ್ ಮತ್ತು ಬ್ರಿಟನ್ ದೇಶಗಳ ಬಗ್ಗೆ ಭಾರತೀಯರಿಗೆ ನಿರೀಕ್ಷೆ ಹೆಚ್ಚಿದೆ. ಈ ದೇಶಗಳು ಭಾರತವನ್ನು ಮಿತ್ರದೇಶವನ್ನಾಗಿ ಕಾಣುವುದಕ್ಕಿಂತ ಪಾರ್ಟ್ನರ್ ದೇಶವಾಗಿ ಕಾಣುವುದು ಹೆಚ್ಚು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ಅಂತಾರಾಷ್ಟ್ರೀಯ

0 ದುಬೈ : ದುಬೈನಂತಹ ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ, ಫಾರೆಸ್ಟರ್ ಕ್ರಿಯೇಟರ್ಸ್‌ನ ಸಂಸ್ಥಾಪಕ ಪರಿಸರ ತಜ್ಞ ಡಾ.ಆರ್.ಕೆ.ನಾಯರ್...

ಸಿನಿಮಾ

0 ಬೆಂಗಳೂರು : ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ , ಅವರ ಗೆಳತಿ ಪವಿತ್ರಾ ಗೌಡ ಸೇರಿ 13 ಮಂದಿಗೆ 6 ದಿನ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ...

error: Content is protected !!