ಮಂಡ್ಯ : ಮಾ. 12ರಂದು ಬೆಂಗಳೂರು -ಮೈಸೂರು ಹೈವೇ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಮೋದಿ ರೋಡ್ ಶೋ ಮೂಲಕ ಸಂಚರಿಸುವ ಮಾರ್ಗದಲ್ಲಿ ಡ್ರೋನ್ ಹಾರಾಟ ನಿಷೇಧ ಮಾಡಲಾಗಿದೆ ಮಂಡ್ಯ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಆದೇಶ ಹೊರಡಿಸಿದ್ದಾರೆ.
ಮಾ. 12 ರಂದು ಬೆಂಗಳೂರು – ಮೈಸೂರು ಹೈವೇಯನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ರಾಜ್ಯಕ್ಕೆ ಮೋದಿ ಆಗಮಿಸಲಿದ್ದಾರೆ.
ಮಂಡ್ಯ ಜಿಲ್ಲೆಯಾದ್ಯಂತ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮೂಲಕ ಸಂಚಾರ ನಡೆಸಿಲಿದ್ದಾರೆ. ಪ್ರಧಾನಿ ಸಂಚಾರ ಮಾಡುವ ಮಾರ್ಗ ಸುತ್ತ 15 ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ ಭದ್ರತಾ ದೃಷ್ಟಿಯಿಂದ ಡ್ರೋನ್, ಹೆಲಿಕಾಪ್ಟರ್, ಮಾಧ್ಯಮ ರಹಿತ ಎಲೆಕ್ಟ್ರಾನಿಕ್ ವಸ್ತುಗಳ ಹಾರಾಟ ನಿರ್ಬಂಧ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಗೋಪಾಲಕೃಷ್ಣರಿಂದ ಮಾಧ್ಯಮ ಪ್ರಕರಣೆಯ ಮೂಲಕ ಆದೇಶ ಹೊರಡಿಸಿದ್ದಾರೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, drone ban, Mandya District Collector Gopalakrishna, mysore Bengaluru road, Prime minister Narendra Modi

Click to comment