ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಇಂದು ಮಂಡ್ಯದ ಚಾಮುಂಡೇಶ್ವರ ನಗರದಲ್ಲಿರುವ ಸ್ವಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿದ್ದು, ಅಂಬರೀಶ್ ನೆನೆದು ಕಣ್ಣೀರಿಟ್ಟಿದ್ದಾರೆ. ಇದೇ ವೇಳೆ ಅವರು ನಾನು ಕುಟುಂಬ ರಾಜಕಾರಣಕ್ಕೆ ಬಂದಿಲ್ಲ ಅಂತ ಹೇಳಿದ ಅವರು ಆಕ್ಮಸಿಕವಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದರು.
ನಾನು ರಾಜಕೀಯಕ್ಕೆ ಪ್ರವೇಶಿಸಿ 4 ವರ್ಷವಾಗಿದೆ. ಜನರ ಮಾತಿಗೆ ಕಟ್ಟುಬಿದ್ದು ರಾಜಕೀಯಕ್ಕೆ ಬಂದೆ. ಅಂಬರೀಷ್‌ಗಿದ್ದ ಪ್ರಭಾವಿಗಳ ಒಡನಾಟ ನನಗೂ ಇದೆ. ರಾಜಕೀಯ ಅನಿವಾರ್ಯವಲ್ಲ. ಆಕಸ್ಮಿಕವಾಗಿ ಬಂದೆ. ಸ್ವಾರ್ಥ, ಮಗನಿಗಾಗಿ ರಾಜಕೀಯ ಮಾಡಿಲ್ಲ. ಎಂಎಲ್‌ಸಿ ಆಗುವಂತೆ ಬಹಿರಂಗ ಆಹ್ವಾನ ಬಂದಿತ್ತು
ನಾನು ಯಾರು ಅಂಬರೀಶ್ ಅವರು ಅಂತ ಇಡೀ ಇಂಡಿಯಾಕ್ಕೆ ಗೊತ್ತು. ಇಂದು ರಾಜಕಾರಣ ಎನ್ನುವುದು ದುಡ್ಡು ಕೊಟ್ಟು ಮಾಡಿಕೊಳ್ಳುವ ಹಾಗೇ ಇದೆ. ಅವಶ್ಯಕತೆ ರಾಜಕಾರಣ ನನಗೆ ಬೇಕಾಗಿಲ್ಲ, ನನಗೆ ಯಾವುದು ಅನಿವಾರ್ಯತೆ ಇಲ್ಲ ಅಂತ ಹೇಳಿದರು. ಕೆಲವು ಮಾಧ್ಯಮಗಳಲ್ಲಿ ನನ್ನ ಹಾಗೂ ನನ್ನ ಮಗನ ರಾಜಕೀಯದ ಬಗ್ಗೆ ಹಲವು ಮಂದಿ ಪ್ರಸ್ತಾಪನೆ ಮಾಡಿದ್ದಾರೆ ಅಂಥ ಮಾಧ್ಯಮಗಳ ವಿರುದ್ದ ಕಿಡಿಕಾರಿದರು. ಇದೇ ವೇಳೆ ಅವರು ನನ್ನ ಚುನಾವಣೆ ಬಳಿಕ ನನ್ನ ವಿರುದ್ದ ಕಿಡಿಕಾರಿದರು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರ ವಿರುದ್ದ ಪರೋಕ್ಷವಾಗಿ ಉಲ್ಲೇಖಿಸಿದರು. ನನ್ನ ವಿರುದ್ದ ಮದ್ದೂರು, ಮೇಲುಕೋಟೆಯಲ್ಲಿ ನನ್ನ ವಿರುದ್ದ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲಾಗಿತ್ತು ಅಂತ ಹೇಳಿದರು.

ಇದೇ ವೇಳೆ ಅವರು ತಮ್ಮ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಮಂಡ್ಯ ಜಿಲ್ಲೆಯನ್ನು ನಾವು ಕಾಪಾಡಬೇಕಾಗಿದೆ, ನಮಗೆ ಮಂಡ್ಯದಲ್ಲಿ ರಾಜಕಾರಣ ಬೇಕಾಗಿಲ್ಲ, ನಮಗೆ ಬೇಕಾಗಿರುವುದು ಮಂಡ್ಯದ ಅಭಿವೃದ್ದಿ ಅಂತ ತಿಳಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಕೆಲವರು ನಮ್ಮ ಧ್ವನಿ ಅಡಗಿಸಲು ಮುಂದಾಗುತ್ತಿದ್ದಾರೆ ಎಂದು ದಳಪತಿಗಳ ವಿರುದ್ದ ಕಿಡಿಕಾರಿದ ಅವರು ಭದ್ರಕೋಟೆ ಅಂತೀರಾ ಏನು ಅಭಿವೃದ್ದಿ ಮಾಡಿದ್ದೀರಾ ಅಂತ ಪ್ರಶ್ನೆ ಮಾಡಿದರು.
ಮೈಶುಗರ್ ಮತ್ತು ಪಾಂಡವ ಪುರ ಸಕ್ಕರೆ ಕಾರ್ಖಾನೆ ಈಗ ಒಂದು ಹಂತಕ್ಕೆ ಬಂದಿದೆ ಎಂದು ಅವರು ಹೇಳಿದರು.

