ಯುಎಸ್ : ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಮಧ್ಯೆಯೇ ಹೊರ ನಡೆದಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದ ಕುರಿತು ಮಾತನಾಡುವಾಗ ಮಾತಿನ ಮಧ್ಯೆ ಸ್ಟೇಜ್‌ನಿಂದ ಹೊರ ನಡೆಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪತ್ರಿಕಾಗೋಷ್ಠಿಯಲ್ಲಿ ವರದಿಗಾರರೊಬ್ಬರು, ʻಅಧ್ಯಕ್ಷರೇ, ಇದು(ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತ) ಏಕೆ ಸಂಭವಿಸಿತು ಎಂಬುದರ ಕುರಿತು ನಿಮಗೆ ಈಗ ಏನು ಗೊತ್ತು? ಮತ್ತು ಅದರಿಂದ ನಿಮಗೆ ಏನೂ ಏರಿಳಿತದ ಪರಿಣಾಮ ಆಗುವುದಿಲ್ಲ ಎಂದು ನೀವು ಅಮೆರಿಕನ್ನರಿಗೆ ಭರವಸೆ ನೀಡಬಹುದೇ? ಎಂಬ ಪ್ರಶ್ನೆಗಳು ಹೆಚ್ಚುತ್ತಿದ್ದಂತೆಯೇ ಬೈಡನ್ ವೇದಿಕೆಯಿಂದ ಹೊರ ನಡೆದಿದ್ದಾರೆ.

ಶ್ವೇತಭವನದ ಯೂಟ್ಯೂಬ್ ಚಾನೆಲ್‌ನಲ್ಲಿ ಬೈಡನ್ ಹೊರನಡೆಯುತ್ತಿರುವ ವಿಡಿಯೋ ಪ್ರಸಾರ ಮಾಡಲಾಗಿದೆ.
"Can you assure Americans that there won't be a ripple effect? Do you expect other banks to fail?"
BIDEN: *shuts door* pic.twitter.com/CNuUhPbJAi— RNC Research (@RNCResearch) March 13, 2023