ಹಿರಿಯ ನಟ ಸಮೀರ್ ಖಖರ್ ಅವರು ನಿಧನರಾಗಿದ್ದಾರೆ ಎಂದು ಅವರ ಕಿರಿಯ ಸಹೋದರ ಗಣೇಶ್ ಖಖರ್ ತಿಳಿಸಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಇಂದು ಸ್ಥಳೀಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ನಿನ್ನೆ ಮಧ್ಯಾಹ್ನ ಅವರಿಗೆ ಉಸಿರಾಟದ ತೊಂದರೆ ಇತ್ತು ಬಳಿಕ, ಅವರನ್ನು ಬೊರಿವಾಲಿಯ ಎಂಎಂ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಮೂರ್ಛೆ ಹೋದರು ಮತ್ತು ಐಸಿಯುಗೆ ದಾಖಲಿಸಲಾಯಿತು. ನಂತರ, ಬಹು ಅಂಗಾಂಗ ವೈಫಲ್ಯದಿಂದಾಗಿ, ಅವರು ಇಂದು ಮುಂಜಾನೆ 4.30 ಕ್ಕೆ ನಿಧನರಾದರು. ಅವರ ಅಂತಿಮ ವಿಧಿಗಳನ್ನು ಬೋರಿವಾಲಿಯ ಬಾಭಾಯ್ ನಾಕಾ ಸ್ಮಶಾನದಲ್ಲಿ ನಡೆಸಲಾಗುವುದು ಎಂದು ಗಣೇಶ್ ಮಾಹಿತಿ ನೀಡಿದ್ದಾರೆ.
ಅವರು1980 ಮತ್ತು 1990 ರ ದಶಕಗಳಲ್ಲಿ ದೂರದರ್ಶನದಲ್ಲಿ ಜನಪ್ರಿಯರಾಗಿದ್ದರು. ಅವರ 38 ವರ್ಷಗಳ ನಟನಾ ವೃತ್ತಿಜೀವನದಲ್ಲಿ, ಅವರು ಹಲವಾರು ಟಿವಿ ಧಾರವಾಹಿ ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನುಕ್ಕಡ್, ಮನೋರಾಜನ್, ಸರ್ಕಸ್, ನಯಾ ನುಕ್ಕಾಡ್, ಶ್ರೀಮಾನ್ ಶ್ರೀಮತಿ ಮತ್ತು ಅದಾಲತ್ ಜೊತೆಗೆ, ಅವರು ಹಲವಾರು ಪ್ರಮುಖ ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದರು. ಸುರಭಿ ಚಂದ್ನಾ ಮತ್ತು ನಮಿತ್ ಖನ್ನಾ ನಟಿಸಿದ ಸಂಜೀವಿನಿ ಚಿತ್ರದಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು.
