ಮೈಸೂರು : ನಂಜನಗೂಡು ಕ್ಷೇತ್ರದಲ್ಲಿ ನಾನು ಸ್ಪರ್ಧಿಸಲ್ಲ ಎಂದು ಕಾಂಗ್ರೆಸ್ ನಾಯಕ ಹೆಚ್. ಸಿ ಮಹದೇವಪ್ಪ ಘೋಷಿಸಿದ್ದಾರೆ.
ಇಂದು ಮೈಸೂರಿನ ವಿಜಯನಗರದಲ್ಲಿರುವ ಆರ್ ಧ್ರುವನಾರಾಯಣ ನಿವಾಸಕ್ಕೆ ಆಗಮಿಸಿದ ಹೆಚ್ ಸಿ ಮಹದೇವಪ್ಪ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು ನಂಜನಗೂಡು ಕ್ಷೇತ್ರದಲ್ಲಿ ನಾನು ಸ್ಪರ್ಧಿಸಲ್ಲ , ಆರ್ ಧ್ರುವನಾರಾಯಣ ಪಾರ್ಥಿವ ಶರೀರ ನೋಡಿದಾಗಲೇ ನಾನು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.
ನಂಜನಗೂಡು ಕ್ಷೇತ್ರದಿಂದ ಆಯ್ಕೆ ಬಯಸಿ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಮಾಜಿ ಸಂಸದ ಆರ್.ಧ್ರುವನಾರಾಯಣ್ ಅರ್ಜಿ ಸಲ್ಲಿಸಿದ್ದರು.
Advertisement. Scroll to continue reading.

ಆದರೆ ಧ್ರುವನಾರಾಯಣ್ ವಿಧಿವಶರಾದ ಹಿನ್ನೆಲೆ ಅವರ ಪುತ್ರ ದರ್ಶನ್ ಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆ ನಂಜನಗೂಡು ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಕಾಂಗ್ರೆಸ್ ನಾಯಕ ಹೆಚ್. ಸಿ ಮಹದೇವಪ್ಪ ಹೇಳಿದ್ದಾರೆ.
In this article:congress, Diksoochi news, diksoochi Tv, diksoochi udupi, election 2023, H.C.Mahadevappa, mysore, nanjanagood

Click to comment