ಕೇರಳ : 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪ್ಪುತಾರ ಪಂಚಾಯತ್‌ನ ಕೈತಪಾಠಲ್ ನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಲಿಜಿ (38) ಮತ್ತು ಬೆನ್ ಟಾಮ್ (7) ಮೃತಪಟ್ಟವರು.
ಒಂದು ದಿನದ ಹಿಂದೆಯಷ್ಟೇ ಲಿಜಿ ಅವರ 28 ದಿನದ ನವಜಾತ ಶಿಶು ಹಾಲು ಕುಡಿಯುತ್ತಿದ್ದ ವೇಳೆ ಉಸಿರುಗಟ್ಟಿ ಮೃತಪಟ್ಟಿದೆ. ಲಿಜಿ ಅದೇ ದುಃಖದಲ್ಲಿ ಮೌನವಾಗಿಯೇ ಇದ್ದರು ಎನ್ನಲಾಗಿದೆ. ತನ್ನ ಮನೆಯವರು ಗುರುವಾರ ಚರ್ಚ್ ಗೆಂದು ಹೋಗುವಾಗ, ಲಿಜಿ ಹಾಗೂ ಮಗ ಇಬ್ಬರು ಚರ್ಚ್‌ಗೆ ಹೋಗದೆ ಮನೆಯಲ್ಲೇ ಇದ್ದರು.
Advertisement. Scroll to continue reading.

ಮನೆಯವರು ಚರ್ಚ್‌ನಿಂದ ವಾಪಾಸು ಬಂದಾಗ ಮನೆಯಲ್ಲಿ ಲಿಜಿ ಹಾಗೂ ಬೆನ್ ಟಾಮ್ ಇಲ್ಲದಿರುವುದನ್ನು ಗಮನಿಸಿದ್ದಾರೆ. ಎಲ್ಲೆಡೆ ಹುಡುಕಿದಾಗ ಕೊನೆಗೆ ಬಾವಿಯಲ್ಲಿ ಇಬ್ಬರು ಇರುವುದು ಪತ್ತೆಯಾಗಿದೆ. ಅಗ್ನಿಶಾಮಕ ದಳದವರು ಬಂದು ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.
ಇನ್ನು ಹಿರಿಯ ಮಗ ಲಿಜಿಗೂ ಹೃದಯ ಸಂಬಂಧಿ ಕಾಯಿಲೆ ಇತ್ತು ಎನ್ನಲಾಗಿದೆ.
Advertisement. Scroll to continue reading.
