ಉಡುಪಿ : ಸಮಾಜಸೇವಕ, ಕಾಂಗ್ರೆಸ್ ಮುಖಂಡ ಕೆ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಟಿಕೆಟ್ ಸಿಗಲಿ ಇಂದು ಬೆಳಿಗ್ಗೆ ಕೃಷ್ಣಮೂರ್ತಿ ಅವರ ಅಭಿಮಾನ ಬಳಗ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜೊತೆಗೂಡಿ ಉಡುಪಿಯ ರಥಬೀದಿಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ ಜಯಶೆಟ್ಟಿ ಬನ್ನಂಜೆ ಅವರ ನೇತೃತ್ವದಲ್ಲಿ ಶ್ರೀ ಗುರುರಾಯರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಒಂದು ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹೆಸರು ನಮೂದಿಸದಿದ್ದಲ್ಲಿ ಅಂತಹ ಸಂದರ್ಭದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ಹಿಂಜರಿಯಬಾರದು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೂಡ ಅವರ ಜೊತೆ ಕೈಜೋಡಿಸುತ್ತೇವೆ. ಕೃಷ್ಣಮೂರ್ತಿಯವರು ವಿಜಯಮಾಲೆ ಧರಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಈ ವೇಳೆ ಜಯಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷರಾದ ಚರಣ್ ರಾಜ್ ಬಂಗೇರ,
ಯಶೋದ ಆಟೋ ಯೂನಿಯನ್ ಅಧ್ಯಕ್ಷರಾದ ಉದಯ್, ಚಾಂತಾರುಗ್ರಾಮ ಪಂಚಾಯತ್‌ನ ಸದಸ್ಯ ಸಂದೇಶ್ ಶೆಟ್ಟಿ,
ಚಾಂತಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆಯಾದ ಸರಸ್ವತಿ, ಬ್ರಹ್ಮಾವರ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷೆ ಗಾಯತ್ರಿ,
ಸಂತೆಕಟ್ಟೆ ಗೂಡ್ಸ್ ಟೆಂಪೋ ಚಾಲಕರ ಮಾಜಿ ಅಧ್ಯಕ್ಷರು ಆದ ಜಯಕರ ಸುವರ್ಣ ಕಲ್ಯಾಣಪುರ, ಮಹೇಶ್ ಮಲ್ಪೆ ಹರೀಶ್ ಅಮೀನ್, ಪ್ರವೀಣ್ ಬಾರ್ಕೂರ್. ಪ್ರವೀಣ್ ಪೂಜಾರಿ, ಶೈಲೇಶ್ ಭಾಸ್ಕರ ಪಿ. ಅಮೀನ್, ರವಿ ಸದಾನಂದ, ಶೇರಿಗಾರ್. ಪ್ರಸಾದ್ ಆಚಾರ್ಯ, ಗಣೇಶ್ ಶೆಟ್ಟಿ ಕೀಳಿಂಜೆ, ವಾಲ್ಟರ್ ಡಿಸೋಜ ಕೊಳಲಗಿರಿ, ರಾಜೇಶ್ ಪ್ರಭು ಪರ್ಕಳ, ರಾಜೇಶ್ ನಿಟ್ಟೂರು, ಯಶೋಧ ಯೂನಿಯನ್‌ನ ಪದಾಧಿಕಾರಿಗಳು, ಕೃಷ್ಣಮೂರ್ತಿ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜೊತೆಗಿದ್ದರು. ಈ ಕಾರ್ಯಕ್ರಮವನ್ನು ಗಣೇಶ್ ರಾಜ್ ಬೆಟ್ಟು ಸಂಘಟಿಸಿ, ಗಣೇಶ್ ಶೆಟ್ಟಿ ಕೀಳಿಂಜೆ ವಂದಿಸಿದರು.
ಈ ಸಂದರ್ಭದಲ್ಲಿ 101 ತೆಂಗಿನಕಾಯಿ ರಾಘವೇಂದ್ರ
ಮಠದ ಮುಂಭಾಗ ಒಡೆಯಲಾಯಿತು.

