ಬ್ರಹ್ಮಾವರ : ಜ್ವರ, ಹೊಟ್ಟೆನೋವಿನಿಂದ ಬಳಲುತ್ತಿದ್ದ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಆರೂರು ಗ್ರಾಮದಲ್ಲಿ ನಡೆದಿದೆ.
ಖುಷಿ ಮೃತ ಮಗು.
ಬಿಹಾರ ರಾಜ್ಯ ಮೂಲದವರಾದ ರಾಜ್ ಕುಮಾರ್, ತನ್ನ ಹೆಂಡತಿ, ಮಕ್ಕಳೊಂದಿಗೆ ಪ್ರಸ್ತುತ ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ಹೆಬ್ಬಾರು ಬೆಟ್ಟು ಎಂಬಲ್ಲಿ ಸಕಲೇಶಪುರದ ಎನ್.ಆರ್ ವಿವೇಕ್ ಎಂಬವರಿಗೆ ಸಂಬಂಧಿಸಿದ ಕೃಷಿ ಫಾರ್ಮ್ ನ ಬಿಡಾರದಲ್ಲಿ ವಾಸಮಾಡಿಕೊಂಡಿದ್ದರು. ಫಾರ್ಮ್ ನಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರ ಎರಡು ವರ್ಷದ ಮಗಳಾದ ಖುಷಿಗೆ ಬುಧವಾರ ಜ್ವರ ಹಾಗೂ ಹೊಟ್ಟೆ ವೋವು ಕಾಣಿಸಿಕೊಂಡಿದೆ.

ಅವಳನ್ನು ಪೇತ್ರಿಯ ಪ್ರಾಥಮಿಕ ಆಸ್ಪತ್ರೆಯ ವೈದ್ಯರ ಬಳಿ ಹೋದಾಗ ವೈದ್ಯರು ಸಿರಪ್ ನೀಡಿದ್ದು, ಅಲ್ಲದೇ ಅವಳಿಗೆ 10 ದಿನಗಳ ಹಿಂದೆ ಹುಷಾರಿಲ್ಲದೇ ಇದ್ದಾಗ ನೀಡಿದ ಉಳಿದ ½ ಮಾತ್ರೆ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಮನೆಗೆ ಬಂದು ಅವಳಿಗೆ 1 ವಾರದ ಹಿಂದೆ ಮನೆಯಲ್ಲಿ ತಂದಿಟ್ಟಿದ್ದ ಹಾಲನ್ನು ಬಿಸಿ ಮಾಡಿ ಆರಿಸಿ ಸ್ವಲ್ಪ ನೀಡಿ, ಬಳಿಕ 5 ಎಮ್‌ಎಲ್ ಸಿರಪನ್ನು ನೀಡಿ, ನಂತ್ರ ½ ಮಾತ್ರೆಯನ್ನು ಪುಡಿ ಮಾಡಿ ಸ್ವಲ್ಪ ಹಾಲನ್ನು ಹಾಕಿ ಕುಡಿಸಿ ಮಲಗಿಸಿದ್ದಾರೆ.
ಬಳಿಕ ಮಧ್ಯಾಹ್ನ 3:00 ಗಂಟೆಯ ವೇಳೆ ಖುಷಿಯು ತೀರಾ ಅಸ್ವಸ್ಥಗೊಂಡಿದ್ದು, ಅವಳನ್ನು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಖುಷಿ ಈಗಾಗಲೆ ಮೃತ ಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

