ಉಳ್ಳಾಲ : ಮಹಿಳೆಗೆಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ನಿನ್ನೆ ಸಂಜೆ ಕೋಟೆಪುರ ನಡೆದಿದೆ.
ದೆಹಲಿ ಮೂಲದ 35-40 ವರ್ಷದ ಮಹಿಳೆಯ ಹತ್ಯೆ ನಡೆದಿದೆ. ಈಕೆ ಜತೆಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸೆಲೂನ್ ಮಾಲೀಕರ ಮೂಲಕ ಬಾಡಿಗೆ ಮನೆ ಪಡೆದುಕೊಂಡಿದ್ದರು. ಮನೆಗೆ ಬರುವಾಗ ಬಟ್ಟೆ ವ್ಯಾಪಾರ ನಡೆಸುವವರು ಎಂದು ತಿಳಿಸಿದ್ದಾರೆ. ಇನ್ನೇನು ಬಟ್ಟೆಗಳು ಬರಬೇಕಿದೆ ಎಂದು ಹೇಳಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
Advertisement. Scroll to continue reading.

ಗುರುವಾರ ಸಂಜೆಯಾದರೂ ಇಬ್ಬರೂ ಮನೆಯಿಂದ ಹೊರಬಾರದೇ ಇರುವುದನ್ನು ಸ್ಥಳೀಯರು ಗಮನಿಸಿ ಮನೆಯನ್ನು ಪರಿಶೀಲಿಸಿದಾಗ ಶೌಚಾಲಯದೊಳಗೆ ಮಹಿಳೆಯ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ
ಸ್ಥಳಕ್ಕೆ ಬೆರಳಚ್ಚು ತಜ್ಞರು, ಫಾರೆನ್ಸಿಕ್ ವಿಭಾಗ, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.

In this article:Delhi, Diksoochi news, diksoochi Tv, diksoochi udupi, Featured, kotekaru, Murder, ullala

Click to comment