ರಾಜಸ್ಥಾನ : ರಾಜ್ಯದಲ್ಲಿ 19 ಹೊಸ ಜಿಲ್ಲೆಗಳನ್ನ ರಚಿಸಲಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಮೂರು ಹೊಸ ವಿಭಾಗಗಳನ್ನು ರಚಿಸಲಾಗಿದ್ದು, ಈಗ ರಾಜಸ್ಥಾನದಲ್ಲಿ 52 ಜಿಲ್ಲೆಗಳು ಬರಲಿವೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಗೆಹ್ಲೋಟ್, ರಾಜ್ಯದಲ್ಲಿ ಕೆಲವು ಹೊಸ ಜಿಲ್ಲೆಗಳ ರಚನೆಗೆ ಬೇಡಿಕೆಗಳು ಬಂದಿವೆ. ಈ ಪ್ರಸ್ತಾವನೆಗಳನ್ನ ಪರಿಶೀಲಿಸಲು ನಾವು ಉನ್ನತ ಮಟ್ಟದ ಸಮಿತಿಯನ್ನ ರಚಿಸಿದ್ದೇವೆ ಮತ್ತು ನಾವು ಅಂತಿಮ ವರದಿಯನ್ನು ಸ್ವೀಕರಿಸಿದ್ದೇವೆ. ನಾನು ಈಗ ರಾಜ್ಯದಲ್ಲಿ ಹೊಸ ಜಿಲ್ಲೆಗಳ ರಚನೆಯನ್ನ ಘೋಷಿಸುತ್ತೇನೆ ಎಂದರು.
ಯಾವುವು 19 ಜಿಲ್ಲೆಗಳು :

ವಿಧಾನಸಭೆಯಲ್ಲಿ ಸಿಎಂ ಗೆಹ್ಲೋಟ್ ಘೋಷಿಸಿದ 19 ಹೊಸ ಜಿಲ್ಲೆಗಳ ಪೈಕಿ ಅನುಪ್‌ಗಢ್, ಬಲೋತ್ರಾ, ಬೇವಾರ್, ದೀಗ್, ದುಡು, ಜೈಪುರ ಉತ್ತರ, ಜೈಪುರ ದಕ್ಷಿಣ, ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ, ಗಂಗಾಪುರ ಸಿಟಿ, ಕೆಕ್ರಿ, ಕೊಟ್‌ಪುಟ್ಲಿ, ಬೆಹ್ರೋರ್, ಖೈರ್ತಾಲ್, ನೀಮ್ಕಥಾನ , ಸಂಚೋರ್, ಫಲೋಡಿ, ಸಾಲುಂಬಾರ್, ಶಹಪುರ ಸೇರಿವೆ.
