ದಿನಾಂಕ : ೧೮-೦೩-೨೩, ವಾರ: ಶನಿವಾರ, ತಿಥಿ : ಏಕಾದಶಿ, ನಕ್ಷತ್ರ: ಶ್ರವಣ
ಕೆಲಸದ ಸ್ಥಳದಲ್ಲಿ ನಿಮಗೆ ಕೆಲವು ತೊಂದರೆಗಳು ಎದುರಾಗಲಿವೆ. ಕುಟುಂಬದಲ್ಲಿ ನೆಮ್ಮದಿ ಭಂಗ. ಅನಗತ್ಯ ಕೆಲಸಗಳಿಗಾಗಿ ಖರ್ಚು ಮಾಡುವಿರಿ. ಇತರರಿಗೆ ಸಹಾಯ ಮಾಡಿದರೆ ಉತ್ತಮ. ಶಿವನ ನೆನೆಯಿರಿ.
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಆರೋಗ್ಯದ ವಿಚಾರದಲ್ಲಿ ಸಮಸ್ಯೆ ಎದುರಾಗಲಿದೆ. ವಿವಾಹಿತ ಸಂಬಂಧಗಳಲ್ಲಿ ಪ್ರೀತಿ ಕಡಿಮೆ ಇರುತ್ತದೆ. ದುಷ್ಟ ಜನರ ಸಹವಾಸ ಬೇಡ. ಶಿವನ ಆರಾಧಿಸಿ.

ನಿಮ್ಮ ದಿನಚರಿಯನ್ನು ನೀವು ಬದಲಾಯಿಸಬಹುದು. ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವಿರಿ. ಇದರಿಂದ ನಿಮ್ಮ ಉತ್ಸಾಹ ಹೆಚ್ಚಲಿದೆ. ವ್ಯವಹಾರದ ವಿಚಾರದಲ್ಲಿ ಸ್ನೇಹಿತರ ಅತ್ಯುತ್ತಮ ಬೆಂಬಲ ಇರುತ್ತದೆ. ದುರ್ಗೆಯ ಆರಾಧಿಸಿ.
ನೀವು ದೀರ್ಘಕಾಲದವರೆಗೆ ಯೋಜಿಸುತ್ತಿದ್ದ ಕೆಲಸವನ್ನು ಪ್ರಾರಂಭಿಸಬಹುದು. ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಚುರುಕುಗೊಳಿಸಿ. ನಿಮಗೆ ಲಾಭವಾಗಲಿದೆ. ಮನಸ್ಸಿನ ಗೊಂದಲ ದೂರವಾಗುತ್ತದೆ. ಹನುಮನ ನೆನೆಯಿರಿ.
ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಅಹಂಭಾವ ಬಿಟ್ಟರೆ ಉತ್ತಮ. ಇಲ್ಲವಾದಲ್ಲಿ ಸಂಬಂಧಗಳಲ್ಲಿ ಬಿರುಕು ಸಾಧ್ಯತೆ. ಶ್ರೀರಾಮನ ನೆನೆಯಿರಿ.
ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ನಿಮ್ಮ ಯೋಜನೆಗಳನ್ನು ನೀವು ಬದಲಾಯಿಸಬೇಕಾಗಬಹುದು. ಹಣಕಾಸು ಸಂಬಂಧಿತ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳದೇ ಇರುವುದು ಉತ್ತಮ. ಹಿರಿಯರ ಸಲಹೆಯನ್ನು ಪಾಲಿಸಿ. ವಿಷ್ಣುವನ್ನು ಆರಾಧಿಸಿ.

ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕಾರ್ಯ ಮೆಚ್ಚಲಿದ್ದಾರೆ. ಉತ್ತಮ ಅವಕಾಶಗಳನ್ನು ಪಡೆಯುವಿರಿ. ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಇರಲಿದೆ. ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತದೆ. ಶನಿದೇವನ ನೆನೆಯಿರಿ.
ಸ್ನೇಹಿತರ ಸಹಾಯದಿಂದ ನೀವು ಯೋಜನೆಗಳಲ್ಲಿ ಲಾಭವನ್ನು ಪಡೆಯುವಿರಿ. ನೀವು ವಿದೇಶಿ ಕಂಪನಿಗಳಿಂದ ಉದ್ಯೋಗದ ಅವಕಾಶ ಪಡೆಯುವಿರಿ. ಅಗತ್ಯವಿಲ್ಲದ ಕಡೆ ಮಾತನಾಡಬೇಡಿ. ಉದರ ಸಂಬಂಧಿ ಸಮಸ್ಯೆಗಳು ಕಾಡಬಹುದು. ರುದ್ರಾಭಿಷೇಕ ಮಾಡಿಸಿ.
ನೀವು ಕೆಲಸದಲ್ಲಿ ಪ್ರಮುಖ ಸ್ಥಾನ ಪಡೆಯುವಿರಿ. ಸಹೋದ್ಯೋಗಿಗಳಿಂದ ನಿಮ್ಮ ಬಗೆಗೆ ಟೀಕೆ ವ್ಯಕ್ತವಾಗಲಿದೆ. ಪಾಲುದಾರಿಕೆ ಕಾರ್ಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವಿಘ್ನೇಶ್ವರನ ಆರಾಧಿಸಿ.
ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಪಡೆಯಲು ಸಾಧ್ಯವಾಗದು. ದೈಹಿಕ ನೋವು ಅನುಭವಿಸುವಿರಿ. ಶತ್ರುಗಳಿಂದ ತೊಂದರೆ. ನಿಮ್ಮ ಸಂಗಾತಿಯ ಬಗ್ಗೆ ನಿಮ್ಮ ನಡವಳಿಕೆಯನ್ನು ಉತ್ತಮವಾಗಿ ಇಟ್ಟುಕೊಳ್ಳಿ. ಗುರುವ ನೆನೆಯಿರಿ.

ಕುಟುಂಬದಲ್ಲಿ ಸಾಮರಸ್ಯದ ವಾತಾವರಣ ಇರಲಿದೆ. ಸ್ನೇಹಿತರಿಂದ ಹಣಕಾಸಿನ ಲಾಭವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು. ಸ್ಥಗಿತಗೊಂಡ ಕೆಲಸವನ್ನು ಪ್ರಾರಂಭಿಸುವ ಸಾಧ್ಯತೆಗಳಿವೆ. ಶನೈಶ್ಚರನ ನೆನೆಯಿರಿ.
ಸಾಲ ಕೊಟ್ಟ ಹಣವನ್ನು ಮರಳಿ ಪಡೆಯಬಹುದು. ಹಳೆಯ ಚಿಂತೆ ದೂರವಾಗುತ್ತದೆ. ಮಕ್ಕಳು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವಿರಿ. ನಿಮ್ಮ ಆರೋಗ್ಯವು ಉತ್ತಮವಾಗಿರಲಿದೆ. ಮಂಜುನಾಥನ ನೆನೆಯಿರಿ.

