ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್‌ನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಅವನನ್ನು ಜಲಂಧರ್‌ನಲ್ಲಿ ಬಂಧಿಸಲಾಗಿದೆ. ಅಮೃತ್ ಪಾಲ್ಸಿಂಗ್ ಮತ್ತು ಅವರ ಅನುಯಾಯಿಗಳನ್ನು ಸಹ ಬಂಧಿಸಲಾಯಿತು.
ಎರಡೂ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಅಮೃತ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ, ಪೊಲೀಸರು ಆತನನ್ನ ತಂತ್ರದಿಂದ ಹಿಡಿದಿದ್ದು, ಆತನನ್ನ ಬೆನ್ನಟ್ಟಿ ಬಂಧಿಸಲಾಗಿದೆ.
ಅಮೃತ್ ವಿರುದ್ಧ ಪಂಜಾಬ್ ಪೊಲೀಸರು ಈಗಾಗಲೇ ಮೂರು ಪ್ರಕರಣಗಳನ್ನ ದಾಖಲಿಸಿದ್ದಾರೆ. ಬಂಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಅಶಾಂತಿ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ. ರಾಜ್ಯಾದ್ಯಂತ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ಇಂಟರ್ನೆಟ್ ಸೇವೆಗಳು ಮತ್ತು ಎಸ್‌ಎಂಎಸ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ.

ಮರ್ಸಿಡಿಸ್ ಕಾರು ಬಿಟ್ಟು ಮತ್ತೊಂದು ಕಾರು ಖರೀದಿಸಿರುವ ಅಮೃತ್ ಪಾಲ್ ಸಿಂಗ್ ಹಲವು ದಿನಗಳಿಂದ ಭೂಗತವಾಗಿದ್ದ. ಆತನನ್ನ ಬಂಧಿಸುವಂತೆ ಹಲವು ದಿನಗಳಿಂದ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿತ್ತು.
