ವರದಿ : ಬಿ. ಎಸ್. ಆಚಾರ್ಯ
ಬ್ರಹ್ಮಾವರ : ವ್ಯಕ್ತಿಗಿಂತ ಪಕ್ಷ ಮುಖ್ಯ ಒಂದೇವೇದಿಕೆಯಲ್ಲಿ ಕಾಂಗ್ರೇಸ್ ವರಿಷ್ಠರ ಮತ್ತು ಕಾರ್ಯಕರ್ತರ ಟಿಕೇಟ್ ಆಕಾಂಕ್ಷಿಗಳ ಏಕಸ್ವರದ ಧ್ವನಿ ಉಡುಪಿ ವಿಧಾನಸಭಾ ಕ್ಷೇತದ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಪೇತ್ರಿ ಯುವಕ ಮಂಡಲದ ಬಳಿ ಕಾಂಗ್ರೆಸ್ ಪಕ್ಷದಿಂದ ಕರಾವಳಿ ಧ್ವನಿ ಯಾತ್ರೆ ಕಾರ್ಯಕ್ರಮ ಜರುಗಿತು.
ಪೇತ್ರಿ ಬಸ್ ನಿಲ್ದಾಣದ ಬಳಿಯಿಂದ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಕಾಲುನಡಿಗೆ ಜಾಥಾ ಮೂಲಕ ಸಾಗಿ ಬಂದರು.
ಈ ಸಂದರ್ಭ ಕಾಂಗ್ರೇಸ್ ಮುಖಂಡರಾದ ಬಿ.ಎಲ್.ಶಂಕರ ಮಾತನಾಡಿ, ದೇಶದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಅನೇಕ ಏಳು ಬೀಳುಗಳನ್ನು ಕಂಡಿದೆ . ಕರ್ನಾಟಕ ಕರಾವಳಿ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಇಲ್ಲಿನ ಮತದಾರು ಮತ್ತು ವಲಸೆ ಹೋದ ಜನನಾಯಕರು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಬಂದಿದೆ ಕಾಂಗ್ರೆಸ್ ಪಕ್ಷದ ಅನೇಕ ಜನಪರ ಕಾರ್ಯ ಮಾಡಿದ ಕುರಿತು ಕಾರ್ಯಕರ್ತರು ಮನವರಿಕೆ ಮಾಡಿ ಮುಂದಿನ ಚುನಾವಣೆಯಲ್ಲಿ ಬಹು ಮತದೊಂದಿಗೆ ಜಯಗಳಿಸಲು ಪ್ರಯತ್ನ ಮಾಡಬೇಕಾಗಿದೆ ಎಂದರು .

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಈಗಿನ ಕೇಂದ್ರ ಸರಕಾರ ಕಾಂಗ್ರೇಸ್ ಸರಕಾರ ಇದ್ದ ಜನಸಾಮಾನ್ಯರ ಅಗತ್ಯ ವಸ್ತುಗಳಿಗೆ ೩ ಪಟ್ಟು ಹೆಚ್ಚಿಸಿದೆ ಇದನ್ನು ಪಕ್ಷದ ಕಾರ್ಯಕರ್ತರು ಪ್ರತೀ ಮನೆಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದರು ಇದೇ ಸಂದರ್ಬದಲ್ಲಿ ಪಕ್ಷ ಜನರ ಅಭಿವೃದ್ಧಿಗೆ ಘೋಷಿಸಿರುವ ಅಂಶಗಳ ಪ್ರತಿಯನ್ನು ಹಸ್ತಾಂತರಿಸಿದರು.
ಹಿರಿಯ ಕಾಂಗ್ರೆಸಿಗರಾದ ಕೃಷ್ಣ ಮಡಿವಾಳ ಕೃಷ್ಣ ಪಾಟೀಲ್ ರನ್ನು ಗೌರವಿಸಲಾಯಿತು.
ಬ್ರಹ್ಮಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಿನಕರ ಹೇರೂರು, ಕಾಂಗ್ರೇಸ್ ಪ್ರಮುಖರಾದ ಭುಜಂಗ ಶೆಟ್ಟಿ , ಅಶೊಕ್ ಕುಮಾರ್ ಕೊಡವೂರು , ಪ್ರಖ್ಯಾತ್ ಶೆಟ್ಟಿ, ಎಂ, ಏ ಗಫೂರ , ಪ್ರಸಾದ್‌ರಾಜ್ ಕಾಂಚನ್ , ವೆರೋನಿಕಾ ಕರ್ನೆಲಿಯೋ, ಹರೀಶ್ ಕಿಣಿ, ಮಲ್ಲಿಕಾ ಬಾಲಕೃಷ್ಣ ಪೂಜಾರಿ , ಗೋಪಿ ಕೆ ನಾಯ್ಕ್ , ರಾಜು ಪೂಜಾರಿ ಇನ್ನಿತರು ಉಪಸ್ಥಿತರಿದ್ದರು
ಉಡುಪಿ ವಿಧಾನ ಸಭಾಕ್ಷೇತ್ರದ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಶಿಗಳಾದ ರಮೇಶ್ ಕಾಂಚನ್ ,ಕೃಷ್ಣ ಮೂರ್ತಿ ಆಚಾರ್ಯ , ದಿವಾಕರ ಕುಂದರ್ ,ಪ್ರಖ್ಯಾತ್ ಶೆಟ್ಟಿ ವೇದಿಕೆಯಲ್ಲಿದ್ದರು.