ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಉಗ್ರರು ಮತ್ತು ಒಳನುಗ್ಗುವವರ ವರದಿಗಳನ್ನು ನೀವೆಲ್ಲ ಓದಿರುತ್ತೀರಿ. ಆದರೆ ಶನಿವಾರ ಅಪರೂಪದ ವ್ಯಕ್ತಿಯೊಬ್ಬರು ಭಾರತದ ಗಡಿ ನುಸುಳಿದ್ದಾರೆ.
ಸಾಂಬಾದ ರಾಮಗಢ ಉಪ ವಲಯದಲ್ಲಿ ಪಾಕಿಸ್ತಾನದ ಕಡೆಯಿಂದ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಚಿರತೆಯೊಂದು ಭಾರತದ ಭೂಪ್ರದೇಶವನ್ನು ಪ್ರವೇಶಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದರ ವಿಡಿಯೋವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಿಡುಗಡೆ ಮಾಡಿದೆ ಮತ್ತು ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿದೆ.
Advertisement. Scroll to continue reading.

ಈ ಘಟನೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಡಿಯ ಸಮೀಪ ವಾಸಿಸುವ ಸ್ಥಳೀಯರಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
In this article:Diksoochi news, diksoochi Tv, diksoochi udupi, Featured, jammu kashmir, leopard, pak to India

Click to comment