ಕೊಪ್ಪಳ : ನಾನು ಶಾಸಕನಾದರೇ ಗಂಗಾವತಿಯ ಜನತೆಗೆ ಡಬಲ್ ಬೆಡ್ ರೂಮ್ ಮನೆ ಕಟ್ಟಿಸಿಕೊಡಲಾಗುತ್ತದೆ. ಗಂಗಾವತಿಯಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡಿಕೊಡಲಾಗುತ್ತದೆ. ಗಂಗಾವತಿಯನ್ನು ಇಡೀ ರಾಜ್ಯಕ್ಕೆ ಮಾದರಿಯಾಗಿ ಮಾಡುವ ಕೆಲಸ ಮಾಡುವುದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯಾಧ್ಯಕ್ಷ ಜನಾರ್ದನ ರೆಡ್ಡಿ ಘೋಷಿಸಿದಿದ್ದಾರೆ.
ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಮಂತ್ರಿಯಾಗಿದ್ದಾಗ ಹೊಸಪೇಟೆಯನ್ನು ಸುಂದರವಾಗಿ ಅಭಿವೃದ್ಧಿಗೊಳಿಸಲಾಗಿದೆ. ಗಂಗಾವತಿ ನಗರವನ್ನು ಹಾಗೆಯೇ ಅಭಿವೃದ್ಧಿಗೊಳಿಸಲಾಗುತ್ತದೆ. ಇವತ್ತು ನಾನು ಹೇಗೆ ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇನೆ ಎಂಬುದಕ್ಕೆ ನನ್ನ ಹಿಂದಿನ ಸಾಧನೆಯನ್ನು ನೋಡಿ ಎಂದರು.

ಒಬ್ಬ ಮನುಷ್ಯನನ್ನು ಕೆಡವುವ ಪ್ರಯತ್ನ ಮಾಡಿದ್ರೇ, ಸ್ವಲ್ಪ ಮಾತ್ರ ಕೆಡವಬಹುದು. ಆದ್ರೇ ಆ ಭಗವಂತ ಪ್ರಯತ್ನಿಸಿದ್ರೇ ಸಂಪೂರ್ಣ ಬೀಳಿಸಬಹುದು. ಆದ್ರೇ ಭಗವಂತನ ಆಶೀರ್ವಾದ, ಜನತೆಯ ಆಶೀರ್ವಾದದಿಂದ ಮತ್ತೆ ಮೇಲೆದ್ದು ಬಂದಿದ್ದೇನೆ ಎಂದರು.
ಗಂಗಾವತಿ ನಗರದಲ್ಲಿ ಮಲ್ಟಿ ಸೂಪರ್ ಸ್ಪೆಷಲ್ ಆಸ್ಪತ್ರೆಯನ್ನು ಕಟ್ಟಿಸಿಕೊಡುತ್ತೇನೆ. ಇಲ್ಲೇ ಎಲ್ಲಾ ಚಿಕಿತ್ಸಾ ಸೌಲಭ್ಯ ಸಿಗುವಂತೆ ಮಾಡಲಾಗುತ್ತದೆ. ಗಂಗಾವತಿಗೆ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಗಂಗಾವತಿಯ ಸ್ಲಂ ಜನರಿಗೆ ನಾನು ಶಾಸಕರಾದ ತಕ್ಷಣ ಮನೆ ನೀಡಲಾಗುತ್ತದೆ. ನಾನು ಶಾಸಕರಾದ ತಕ್ಷಣ ನನ್ನ ಅಕ್ಕ-ತಂಗಿಯರಿಗೆ ಬಸವೇಶ್ವರ ಗೃಹ ಯೋಜನೆಯ ಅಡಿಯಲ್ಲಿ ಪ್ರತಿ ಅಕ್ಕ ತಂಗಿಯರ ಹೆಣ್ಣುಮಕ್ಕಳ ಹೆಸರಿನಲ್ಲಿ ಡಬಲ್ ಬೆಡ್ ರೂಮ್ ಕಟ್ಟಿಕೊಡುವಂತ ಕೆಲಸ ಮಾಡಲಾಗುತ್ತದೆ ಎಂದು ಘೋಷಿಸಿದರು.

