ಬೆಂಗಳೂರು : ಈಗಾಗಲೇ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರ ಅಭಿವೃದ್ಧಿ ನಿಗಮಸ್ಥಾಪಿಸಿದೆ. ಈಗ ಮುಂದುವರೆದು ಕರ್ನಾಟಕ ರಾಜ್ಯ ನೇಕಾರರ ಅಭಿವೃದ್ಧಿ ನಿಗಮ ಹಾಗೂ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.
ಈ ಸಂಬಂಧ ಸರ್ಕಾರ ನಡವಳಿಯನ್ನು ಹೊರಡಿಸಿದ್ದು, ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 2ಎಯಿಂದ ಐವರೆಗೂ ನಮೂದಾಗಿರುವ ದೇವಾಂಗ, ದೇವಾಂಗ್, ಕೋಷ್ಠಿ, ಹಟಗಾರ್, ಹಟಕಾರ್ ಜೇಡ್, ವಿಂಕಾರ್, ಜುಲೋಹಿ, ಹಲ್ಕಾರ್, ಹಟಗಾರ್, ಸಮುದಾಯಗಳು ಹಾಗೂ ಕ್ರಮ ಸಂಖ್ಯೆ 76ಎಯಿಂದ ಕ್ಯೂವರೆಗೆ ಕ್ರಮವಾಗಿ ನಮೂದಾಗಿರುವ ನೇಯ್ದ, ಕರುಹಿನ ಶೆಟ್ಟಿ, ಕುರ್ನಿ, ಬಿಳಿಮಗ್ಗ, ತೋಟ, ತೊಗಟರು, ತೊಗಟಿಗ, ತೊಗಟವೀರ, ತೊಗಟಗೇರ, ತೊಗಟವೀರ, ಕ್ಷತ್ರಿಯ, ತೊಗಜ ಪುಷ್ಪಾಂಜಲಿ, ಸೋಣಿಗ, ಜಂಖಾನ, ಐರಿ, ಅವಿರ್, ಸಾಲೆ, ಪಟ್ಟಸಾಲೆ, ಪದ್ಮಸಾಲೆ, ಪದ್ಮಶಾಲಿ, ಪದ್ಮಸಾಲಿ, ಸಾಲಿ, ಪಟ್ಟಸಾಲಿ, ಕೈಕೋಳನ್, ಸೆಂಗುದರ್, ನೇಯ್ಯರ್, ಜಾಡರ್, ಜಾಂದ್ರ, ಸ್ವಕುಳಸಾಲಿ, ಸ್ವಕುಳಸಾಳೆ ಜಾತಿಗಳ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನೇಕಾರರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದ್ದಾರೆ.
ಸರ್ಕಾರದ ಆದೇಶ ಸಂಖ್ಯೆ ಸಕಇ 225 ಬಿಸಿಎ 2000, ದಿನಾಂಕ:30.03.2002ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ-3ಎ ನ ಕ್ರಮಸಂಖ್ಯೆ:2 ರಲ್ಲಿ ನಮೂದಾಗಿರುವ ಕೊಡಗರು ಸಮುದಾಯದವರ ಸರ್ವತೋಮುಖ ಅಭಿವೃದ್ಧಿಗಾಗಿ ‘ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮ’ ವನ್ನು ಸ್ಥಾಪಿಸಿ ಆದೇಶಿಸಿದೆ.

