ದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೆಹಲಿಯ ಬುದ್ಧ ಜಯಂತಿ ಪಾರ್ಕ್‌ಗೆ ಭೇಟಿ ನೀಡಿದ ವೇಳೆ ಗೋಲ್ ಗಪ್ಪ (ಪಾನಿ ಪುರಿ) ಮತ್ತು ಲಸ್ಸಿ ಸೇರಿದಂತೆ ಭಾರತೀಯ ವಿವಿಧ ಖಾದ್ಯಗಳನ್ನು ಸವಿದಿದ್ದಾರೆ.
ಇಬ್ಬರು ನಾಯಕರು ಗೋಲ್ ಗಪ್ಪ ಸವಿಯುತ್ತಿರುವ ಆನಂದ ಕ್ಷಣ ವೈರಲ್ ಆಗಿದೆ. ಬಳಿಕ ಪ್ರಧಾನಿ ಮೋದಿ, ಫ್ಯೂಮಿಯೊ ಕಿಶಿದಾ ಅವರಿಗೆ ಗೋಲ್ ಗಪ್ಪ ಪಾಕವಿಧಾನದ ಕುರಿತು ವಿವರಿಸಿದ್ದಾರೆ. ಬಳಿಕ ಬೀಸಿಲಿನ ಬೇಗೆಯಿಂದ ತಂಪಾಗಿಸಿಕೊಳ್ಳಲು ಮಾವಿನ ಲಸ್ಸಿಯನ್ನು ಇಬ್ಬರು ನಾಯಕರು ಸೇವಿಸಿ ಖುಷಿಪಟ್ಟಿದ್ದಾರೆ.
ಸದ್ಯ ಸಾಮಾನ್ಯ ಭಾರತೀಯರ ಇಷ್ಟದ ಆಹಾರವಾದ ಗೋಲ್-ಗಪ್ಪವನ್ನು ಫ್ಯೂಮಿಯೊ ಕಿಶಿದಾ ಮತ್ತು ನರೇಂದ್ರ ಮೋದಿ ಸವಿದು ಆನಂದಿಸಿರುವ ವೀಡಿಯೋ ವೈರಲ್ ಆಗಿದೆ.
Advertisement. Scroll to continue reading.

In this article:a am panna, Diksoochi news, diksoochi Tv, diksoochi udupi, gol gappa, Japanese PM Fumio Kishida, lussi, PM Modi

Click to comment