ಮುಂಬೈ : ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ತಂದೆ ಮನೆಯಿಂದ ಬರೋಬ್ಬರಿ 72 ಲಕ್ಷ ರೂ. ನಗದು ಕಳವಾಗಿರುವ ಬಗ್ಗೆ ವರದಿಯಾಗಿದೆ.
ಸೋನು ನಿಗಮ್ ಅವರ ತಂದೆ ಅಗಾಕುಮಾರ್ ನಿಗಮ್ ಅವರು ವಾವಿರುವ ಓಶೀವಾರದ ವಿಂಡ್ಸರ್ ಗ್ರಾಂಡ್ ನಲ್ಲಿ ಕಳ್ಳತನ ನಡೆದಿದೆ. ಮಾರ್ಚ್ 19 ರಂದು ಅಗಾ ಕುಮಾರ್ ನಿಗಮ್ ಅವರು ತಮ್ಮ ಕಿರಿಯ ಪುತ್ರಿ ನಿಖಿತಾ ಅವರ ನಿವಾಸಕ್ಕೆ ತೆರಳಿದ್ದು, ಮನೆಗೆ ವಾಪಸ್ ಬಂದಾಗ ಡಿಜಿಟಲ್ ಲಾಕರ್ ನಲ್ಲಿದ್ದ 40 ಲಕ್ಷ ರೂಪಾಯಿ ಕಾಣೆಯಾಗಿತ್ತು. ಈ ವಿಷಯವನ್ನು ತಮ್ಮ ಪುತ್ರಿಗೆ ತಿಳಿಸಿದ್ದು, ಹುಡುಕಾಟ ನಡೆಸಿದ್ದರು. ಈ ನಡುವೆ ಮಾರ್ಚ್ 20ರಂದು ವೀಸಾ ಸಂಬಂಧಿ ಕೆಲಸಗಳಿಗಾಗಿ ಆಗಾಕುಮಾರ್ ಸೋನು ನಿಗಮ್ ಅವರ ನಿವಾಸಕ್ಕೆ ತೆರಳಿದ್ದು ವಾಪಸ್ ಬಂದಾಗ ಮತ್ತೆ 32 ಲಕ್ಷ ರೂಪಾಯಿ ಕಾಣೆಯಾಗಿದ್ದು ಕಂಡುಬಂದಿತ್ತು. ಎರಡು ದಿನಗಳ ಅವಧಿಯಲ್ಲಿ ಒಟ್ಟು 72 ಲಕ್ಷ ರೂಪಾಯಿ ಕಳತನವಾಗಿದೆ ಎಂದು ತಿಳಿದು ಬಂದಿದೆ.

ಸಿಸಿ ಟಿವಿ ಪರಿಶೀಲಿಸಿದ ವೇಳೆ ತಮ್ಮಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ರೆಹಾನ್ ಬ್ಯಾಗ್ ಜೊತೆ ತೆರಳಿದ್ದು ಕಂಡುಬಂದಿತ್ತು. ಎಂಟು ತಿಂಗಳಿನಿಂದ ಆಗಾಕುಮಾರ್ ಅವರ ಕಾರು ಚಾಲಕನಾಗಿದ್ದ ರೆಹಾನ್ ನನ್ನು ಇತ್ತೀಚೆಗಷ್ಟೇ ಕೆಲಸದಿಂದ ತೆಗೆದು ಹಾಕಲಾಗಿತ್ತು. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಸೋನು ನಿಗಮ್ ಅವರ ಸಹೋದರಿ ಮುಂಬೈನ ಓಶೀವಾರ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ.