ದಿನಾಂಕ: ೨೪-೦೩-೨೩, ವಾರ : ಶುಕ್ರವಾರ, ನಕ್ಷತ್ರ : ಅಶ್ವಿನಿ, ತಿಥಿ: ತದಿಗೆ
ಹೊಸ ಕೆಲಸವನ್ನು ಪ್ರಾರಂಭಿಸಲು ಸಕಾಲ. ಹೊಸ ಆಸ್ತಿಯನ್ನು ಖರೀದಿ ಯೋಗ. ಸಂತಸದ ದಿನ. ಹಣಕಾಸು ಸಮಸ್ಯೆ ನಿವಾರಣೆಯಾಗಲಿದೆ. ಲಕ್ಷ್ಮಿಯ ಆರಾಧಿಸಿ.
ಇಂದು ಯಾರಿಗೂ ಸಾಲ ಕೊಡಬೇಡಿ. ಆರೋಗ್ಯದತ್ತ ಗಮನ ಕೊಡಿ. ಅತಿಯಾದ ಕೋಪ, ಮಾತು ಬೇಡ. ಪ್ರಯಾಣದ ಸಮಯದಲ್ಲಿ ತೊಂದರೆ ಅನುಭವಿಸುವಿರಿ. ದುರ್ಗೆಯ ನೆನೆಯಿರಿ.

ಇಂದು ನಿಮಗೆ ಶುಭ ಫಲದಾಯಕ ದಿನ. ಗೆಲುವು ಕಾಣುವಿರಿ. ಯಾವುದೇ ಕೌಟುಂಬಿಕ ಸಮಸ್ಯೆಗೆ ನೀವು ಪರಿಹಾರ ಸಿಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಜಯ. ರುದ್ರಾಭಿಷೇಕ ಮಾಡಿ.
ಮಾತನಾಡುವಾಗ ಎಚ್ಚರ ಅಗತ್ಯ. ಧಾರ್ಮಿಕ ಕೆಲಸಗಳ ವಿಚಾರದಲ್ಲಿ ಜಾಗೃತೆ ಇರಲಿ. ಅನಗತ್ಯ ವಿಚಾರಗಳತ್ತ ಗಮನ ಬೇಡ. ವಿಷ್ಣು ಸಹಸ್ರನಾಮ ಪಠಿಸಿ.
ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸುವಿರಿ. ವ್ಯಾಪಾರದಲ್ಲಿ ಆರ್ಥಿಕ ಲಾಭ. ದೂರ ಪ್ರಯಾಣ ಸಾಧ್ಯತೆ. ಹನುಮನ ನೆನೆಯಿರಿ.
ಇಂದು ಉದಾಸೀನ ಅನುಭವಿಸುವಿರಿ. ದೂರ ಪ್ರಯಾಣ ಬೇಡ. ಯಾರಿಗೂ ಭರವಸೆ ಕೊಡಲು ಹೋಗದಿರುವುದೇ ಉತ್ತಮ. ಹನುಮನ ನೆನೆಯಿರಿ.

ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಲಿದೆ. ಕುಟುಂಬಕ್ಕಾಗಿ ಖರ್ಚು ಮಾಡುವಿರಿ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ರಾಮ ಜಪ ಮಾಡಿ.
ಅಗತ್ಯ ಕೆಲಸಗಳತ್ತ ನಿರ್ಲಕ್ಷ್ಯ ಮಾಡುವುದನ್ನು ತಪ್ಪಿಸಿ. ಪ್ರಮುಖ ಕೆಲಸಗಳನ್ನು ಮಾಡಿ. ಇತರರಿಗೆ ಸಹಾಯಹಸ್ತ ಚಾಚುವಿರಿ. ನಾಗಾರಾಧನೆ ಮಾಡಿ.
ವ್ಯಾಪಾರದಲ್ಲಿ ಆದಾಯ ಹೆಚ್ಚಲಿದೆ. ಇತರರ ಮೇಲೆ ಕೆಲಸದ ಹೊರೆ ಹಾಕದಿರುವುದು ಉತ್ತಮ. ಕೆಲಸ ಆರಂಭಿಸಲು ಸಕಾಲ. ನಾಗಾರಾಧನೆ ಮಾಡಿ.
ಹೊರಗಿನ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ. ಆಲಸ್ಯದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ದುಡುಕಿನ ನಿರ್ಧಾರ ಬೇಡ. ಶನಿದೇವನ ನೆನೆಯಿರಿ.

ಮನೆಗೆ ಅತಿಥಿಗಳ ಆಗಮನ ಇರಲಿದೆ. ಕುಟುಂಬದೊಂದಿಗೆ ಸಂಭ್ರಮದಿ ದಿನ ಕಳೆಯುವಿರಿ. ನಿಮ್ಮ ಜವಾಬ್ದಾರಿ ನಿಭಾಯಿಸಿ. ನಾರಾಯಣನ ನೆನೆಯಿರಿ.
ಅನೈತಿಕ ಚಟುವಟಿಕೆಗಳಿಂದ ದೂರವಿರಿ. ಮನೆಯ ವಾತಾವರಣ ಹದಗೆಡಲಿದೆ. ಸಣ್ಣ ವಿಚಾರಗಳಿಗೆ ಕೋಪಗೊಳ್ಳುವುದು ತಪ್ಪಿಸಿ. ಹನುಮನ ನೆನೆಯಿರಿ.

