ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಭೂಕಂಪನಗಳು ಸಂಭವಿಸುತ್ತಿವೆ. ಇಂದು ಬೆಳಗ್ಗೆ ಮತ್ತು ಮಧ್ಯಾಹ್ನ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ನಗರಗಳಲ್ಲಿ ಎರಡು ಬಾರಿ ಲಘು ಭೂಕಂಪಗಳು ಸಂಭವಿಸಿವೆ.
ಈ ಕುರಿತಂತೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ. ಇಂದು ಬೆಳಗ್ಗೆ 10:28 ಕ್ಕೆ ಛತ್ತೀಸ್‌ಗಢದ ಅಂಬಿಕಾಪುರದ 12 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪನ ತೀವ್ರತೆಯು 3.9 ಇತ್ತು ಎಂದು ಮಾಹಿತಿ ನೀಡಿದೆ
Advertisement. Scroll to continue reading.

ಇತ್ತ ಮಧ್ಯಪ್ರದೇಶದ ಗ್ವಾಲಿಯರ್‌ನ 28 ಕಿಮೀ ಎಸ್‌ಇನಲ್ಲಿ ಇಂದು ಬೆಳಿಗ್ಗೆ 10:31 ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಎರಡು ರಾಜ್ಯಗಳಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
Advertisement. Scroll to continue reading.

In this article:chathisghar, Diksoochi news, diksoochi Tv, diksoochi udupi, earth quake, madhyapradesh

Click to comment