ದಿನಾಂಕ : ೨೫-೦೩-೨೩, ವಾರ : ಶನಿವಾರ, ತಿಥಿ: ಚೌತಿ, ನಕ್ಷತ್ರ: ಭರಣಿ
ಇಂದು ನೀವು ನಿಮ್ಮ ಕೆಲಸದತ್ತ ಹೆಚ್ಚು ಗಮನ ಹರಿಸಬೇಕು. ನೀವು ಸಂಗಾತಿಯಿಂದ ಉಡುಗೊರೆಯನ್ನು ಪಡೆಯುವಿರಿ. ಆಸ್ತಿ ವಿವಾದ ಪರಿಹರಿಸಿಕೊಳ್ಳಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಸಿಗದು. ಶಿವನ ಆರಾಧಿಸಿ.
ಕಚೇರಿಯಲ್ಲಿ ಕೆಲಸದ ವಿಚಾರದಲ್ಲಿ ಒತ್ತಡ ಇರಲಿದೆ. ಕಷ್ಟಪಟ್ಟು ದುಡಿಯಬೇಕಾಗಿದೆ. ಅತಿಯಾದ ಉತ್ಸಾಹದಿಂದ ಇಂದು ಯಾವುದೇ ತಕ್ಷಣದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಪಾಲುದಾರಿಕೆ ವ್ಯವಹಾರಗಳಿಗೆ ಉತ್ತಮ ದಿನ. ರಾಮನ ನೆನೆಯಿರಿ.

ಪೂರ್ಣ ಪರಿಶ್ರಮದಿಂದ ನೀವು ಇಂದು ಕೆಲಸ ಮಾಡುವಿರಿ. ಸ್ನೇಹಿತರೊಂದಿಗೆ ಸುತ್ತಾಡಲು ಹೋಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ನೀವು ಹೊಸ ಯೋಜನೆಗಳಲ್ಲಿ ತೊಡಗಿಸಿಕೊಳ್ಳಬಹುದು. ನಾಗಾರಾಧನೆ ಮಾಡಿ.
ಮಕ್ಕಳ ಚಿಂತೆ ಇರದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹೊಸ ವ್ಯವಹಾರದ ವಿಚಾರದಲ್ಲಿ ಉತ್ತಮ ದಿನ. ಮನೆಯಲ್ಲಿ ಮಂಗಳಕಾರ್ಯ ನಡೆಯಲಿದೆ. ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುವಿರಿ. ವಿಷ್ಣುವನ್ನು ನೆನೆಯಿರಿ.
ಸಂಜೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವಿರಿ. ನಿಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳದಿರಿ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಬೆಳೆಯಲಿದೆ. ಮನೆಯ ಹಿರಿಯರ ವಿಚಾರದಲ್ಲಿ ತಾಳ್ಮೆ ಮತ್ತು ಸಂಯಮ ಇರಲಿ. ದೇವಿಯ ನೆನೆಯಿರಿ.
ಅಧಿಕ ಕೆಲಸ ಇರಲಿದೆ. ಕೆಲಸದ ವಿಚಾರದಲ್ಲಿ ಇಂದು ನೀವು ಪ್ರಸ್ತುತ ಕಾರ್ಯಗಳು ಮತ್ತು ಸಂದರ್ಭಗಳಿಂದ ಬೇಸರವನ್ನು ಅನುಭವಿಸುವಿರಿ. ಕೌಟುಂಬಿಕ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ದೊರೆಯಲಿದೆ. ಶನೈಶ್ಚರನ ನೆನೆಯಿರಿ.

ಸಂಗಾತಿಯೊಂದಿಗೆ ಶಾಪಿಂಗ್‌ಗೆ ಹೋಗಬಹುದು. ಪಾಲುದಾರರೊಂದಿಗಿನ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಮಂಜುನಾಥನ ನೆನೆಯಿರಿ.
ನೀವು ತೆಗೆದುಕೊಂಡ ನಿರ್ಧಾರಗಳು ಉತ್ತಮವಾಗಿರಲಿದೆ. ನೀವು ಹಣವನ್ನು ಎರವಲು ಪಡೆಯಲು ಹೋಗದಿರಿ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಖರ್ಚು ಮಾಡುವಿರಿ. ಇತರರ ಭಾವನೆಗಳ ಬಗ್ಗೆಯೂ ಕಾಳಜಿ ವಹಿಸಿ. ರಾಮನ ನೆನೆಯಿರಿ.
ಹಿರಿಯ ಒಡಹುಟ್ಟಿದವರ ಸಹಕಾರ ಮತ್ತು ಬೆಂಬಲ ಇರಲಿದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಮಕ್ಕಳೊಂದಿಗೆ ಮನಸ್ತಾಪ ಉಂಟಾಗುವುದು. ಸೃಜನಶೀಲ ಕೆಲಸಗಳಿಗೆ ಸಂಬಂಧಿಸಿದ ಜನರು ನಷ್ಟವನ್ನು ಅನುಭವಿಸಬಹುದು. ರಾಯರ ಆರಾಧಿಸಿ.
ವೃತ್ತಿ ಬದುಕಿನಲ್ಲಿ ಉತ್ತಮ ಅವಕಾಶ ಪಡೆಯುವಿರಿ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ಇರುವಿರಿ. ಪೋಷಕರೊಂದಿಗೆ ಜಗಳ ಬೇಡ. ಗಣಪನ ನೆನೆಯಿರಿ.

ಆದಾಯದಲ್ಲಿ ಹೆಚ್ಚಳ ಕಾಣುವಿರಿ. ಉನ್ನತ ಸ್ಥಾನ ಪ್ರಾಪ್ತಿ. ಅಹಂಭಾವ ಬಿಟ್ಟರೆ ಉತ್ತಮ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.
ಉದಾಸೀನ ಪ್ರವೃತ್ತಿ ಬಿಟ್ಟರೆ ಉತ್ತಮ. ಹಿರಿಯರ ಸಲಹೆ ಪಾಲಿಸುವುದು ಉತ್ತಮ. ಆರೋಗ್ಯದ ಕಾಳಜಿಯೂ ಅಗತ್ಯ. ಶಿವನ ಆರಾಧಿಸಿ.

