ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 124 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿಯನ್ನು ಇಂದು ಬೆಳಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಬಿಡುಗಡೆ ಮಾಡಿದ್ದಾರೆ.
ನಿನ್ನೆ ಸಂಜೆ ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇತ್ತು. ಆದರೆ, ಕೊಂಚ ವಿಳಂಬವಾಗಿ ಇಂದು ಪಟ್ಟಿ ಬಿಡುಗಡೆ ಆಗಿದ್ದು, 124 ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ.
ಬೈಂದೂರು ಕ್ಷೇತ್ರಕ್ಕೆ ಕೆ.ಗೋಪಾಲ್ ಪೂಜಾರಿ, ಕುಂದಾಪುರದಿಂದ ಎಂ.ದಿನೇಶ್ ಹೆಗಡೆ, ಕಾಪು ಕ್ಷೇತ್ರಕ್ಕೆ ವಿನಯ್ ಕುಮಾರ್ ಸೊರಕೆಗೆ ಟಿಕೆಟ್ ಸಿಕ್ಕಿದೆ.

ಇನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರಕ್ಕೆ ಹಿಂದಿರುಗಿದ್ದಾರೆ. ಉಳಿದಂತೆ ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಿಂದ, ಕೊರಟಗೆರೆಯಿಂದ ಡಾ ಜಿ ಪರಮೇಶ್ವರ್ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಕೋಲಾರದಲ್ಲಿ ಸ್ಥಳೀಯ ನಾಯಕಿ ಎಂ ರೂಪಕಲಾ ಅವರು ಅಭ್ಯರ್ಥಿಯಾಗಿದ್ದಾರೆ.
ಚಿಕ್ಕೋಡಿ- ಸದಲಗಾ ವಿಧಾನಸಭಾ ಕ್ಷೇತ್ರಕ್ಕೆ ಗಣೇಶ್ ಹುಕ್ಕೇರಿ, ಕಾಗವಾಡಕ್ಕೆ ಭರಮ ಗೌಡ ಆಲಗೌಡ ಕಾಗೆ, ಕುಡಚಿ ಎಸ್‌ಸಿ ಕ್ಷೇತ್ರಕ್ಕೆ ಮಹೇಂದ್ರ ತಮ್ಮಣ್ಣನವರ್, ಹುಕ್ಕೇರಿಗೆ ಎಬಿ ಪಾಟೀಲ್, ಯಮಕನಮರಡಿ ಎಸ್‌ಟಿ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮಾಂತರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್, ಖಾನಾಪುರಕ್ಕೆ ಅಂಜಲಿ ನಿಂಬಾಳ್ಕರ್, ಬೈಲಹೊಂಗಲಕ್ಕೆ ಮಹಾಂತೇಶ ಶಿವಾನಂದ ಕೌಜಲಗಿ, ರಾಮದುರ್ಗದಿಂದ ಅಶೋಕ್ ಎಂ ಪಟ್ಟಣ್, ಜಮಖಂಡಿಗೆ ಆನಂದ ಸಿದ್ದು ನ್ಯಾಮಗೌಡ, ಹುನಗುಂದದಿಂದ ವಿಜಯಾನಂದ ಎಸ್ ಕಾಶಪ್ಪನವರ್, ಮುದ್ದೇಬಿಹಾಳದಿಂದ ಅಪ್ಪಾಜಿ ಅಲಿಯಾಸ್ ಸಿ.ಎಸ್. ನಾಡಗೌಡ, ಬಸವನಬಾಗೇವಾಡಿಯಿಂದ ಶಿವಾನಂದ ಪಾಟೀಲ್.
ಮಸ್ಕಿ ಎಸ್‌ಟಿ ಕ್ಷೇತ್ರಕ್ಕೆ ಬಸವನಗೌಡ ತುರುವಿಹಾಳ, ಕುಷ್ಟಗಿ ವಿಧಾನಸಭೆ ಕ್ಷೇತ್ರದಿಂದ ಅಮರೇಗೌಡ ಪಾಟೀಲ್ ಬಯ್ಯಾಪುರ, ಕನಕಗಿರಿ ಎಸ್‌ಸಿ ವಿಧಾನಸಭೆ ಕ್ಷೇತ್ರದಿಂದ ಶಿವರಾಜ್ ಸಂಗಪ್ಪ ತಂಗಡಗಿ, ಯಲಬುರ್ಗಾದಿಂದ ಬಸವರಾಜ್ ರಾಯರೆಡ್ಡಿ, ಕೊಪ್ಪಳದಿಂದ ಕೆ ರಾಘವೇಂದ್ರ, ಗದಗ ವಿಧಾನಸಭೆ ಕ್ಷೇತ್ರಕ್ಕೆ ಹೆಚ್ ಕೆ ಪಾಟೀಲ್, ರೋಣದಿಂದ ಬಿಎಸ್ ಪಾಟೀಲ್, ಹುಬ್ಬಳ್ಳಿ ಧಾರವಾಡ ಪೂರ್ವದಿಂದ ಪ್ರಸಾದ್ ಅಬ್ಬಯ್ಯ, ಹಳಿಯಾಳ ಕ್ಷೇತ್ರಕ್ಕೆ ಆರ್ ವಿ ದೇಶಪಾಂಡೆ, ಕಾರವಾರ ಸತೀಶ್ ಸೈಲ್, ಭಟ್ಕಳ ಮಂಕಾಳ ಸುಬ್ಬಾ ವಿದ್ಯಾ, ಹಾನಗಲ್ ಶ್ರೀನಿವಾಸ್ ವಿ ಮಾನೆ, ಹಾವೇರಿ ಎಸ್ ಸಿ ರುದ್ರಪ್ಪ ಲಮಾಣಿ, ಬ್ಯಾಡಗಿ ಬಸವರಾಜ್ ಎಂ ಶಿವಣ್ಣನವರ್, ಹಿರೇಕೆರೂರು ಯು ಬಿ ಬಣಕಾರ್, ರಾಣೆಬೆನ್ನೂರು ಪ್ರಕಾಶ್ ಕೆ ಕೋಳಿವಾಡ, ಹಡಗಲಿ ಎಸ್ ಟಿ ಪಿ ಪರಮೇಶ್ವರ್ ನಾಯಕ್.
ಹಗರಿಬೊಮ್ಮನಹಳ್ಳಿ ಎಸ್ ಕ್ಷೇತ್ರಕ್ಕೆ ಭೀಮಾ ನಾಯಕ್, ವಿಜಯನಗರಕ್ಕೆ ಎಚ್ ಆರ್ ಗವಿಯಪ್ಪ, ಕಂಪ್ಲಿ ಎಸ್ ಟಿ ಕ್ಷೇತ್ರಕ್ಕೆ ಜೆಎನ್ ಗಣೇಶ್, ಬಳ್ಳಾರಿ ಎಸ್ ಟಿ ಕ್ಷೇತ್ರಕ್ಕೆ ಬಿ ನಾಗೇಂದ್ರ, ಕಡೂರು ಎಸ್ ಟಿ ಕ್ಷೇತ್ರಕ್ಕೆ ಈ ತುಕಾರಾಂ, ಚಳ್ಳಕೆರೆ ಎಸ್ ಟಿ ಕ್ಷೇತ್ರಕ್ಕೆ ಟಿ ರಘುಮೂರ್ತಿ, ಹಿರಿಯೂರು ಕ್ಷೇತ್ರಕ್ಕೆ ಡಿ ಸುಧಾಕರ್, ಹೊಸದುರ್ಗ ಕ್ಷೇತ್ರಕ್ಕೆ ಗೋವಿಂದಪ್ಪ ಬಿಜಿ, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಎಸ್ ಎಸ್ ಮಲ್ಲಿಕಾರ್ಜುನ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ, ಮಾಯಕೊಂಡ ಎಸಿ ಕ್ಷೇತ್ರಕ್ಕೆ ಕೆಎಸ್ ಬಸವರಾಜ್, ಭದ್ರಾವತಿಯಿಂದ ಸಂಗಮೇಶ್ವರ ಬಿಕೆ, ಸೊರಬ ಕ್ಷೇತ್ರಕ್ಕೆ ಮಧು ಬಂಗಾರಪ್ಪ, ಸಾಗರ ವಿಧಾನಸಭೆ ಕ್ಷೇತ್ರಕ್ಕೆ ಗೋಪಾಲಕೃಷ್ಣ ಬೇಳೂರಿಗೆ ಟಿಕೆಟ್ ಸಿಕ್ಕಿದೆ.

