ದುಬೈನಲ್ಲಿ ಭಾನುವಾರ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರಮಾನ್ಯ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಲೇಷ್ಯಾದ ಒಂಗ್ ಯೆವ್ ಸಿನ್ ಮತ್ತು ಟಿಯೋ ಈ ಯಿ ಅವರನ್ನು 16-21, 21-17, 21-19 ಸೆಟ್‌ಗಳಿಂದ ಸೋಲಿಸಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಸಾತ್ವಿಕ್-ಚಿರಾಗ್ 1965ರಲ್ಲಿ ದಿನೇಶ್ ಖನ್ನಾ ನಂತರ ಕಾಂಟಿನೆಂಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪುರುಷರ ಡಬಲ್ಸ್ ವಿಭಾಗದಲ್ಲಿ 52 ವರ್ಷಗಳ ನಂತ್ರ ಭಾರತದ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋನೇಷ್ಯಾದ ಅನುಭವಿ ಜೋಡಿ ಮೊಹಮ್ಮದ್ ಅಹ್ಸಾನ್ ಮತ್ತು ಹೆಂದ್ರಾ ಸೆಟಿಯಾವಾನ್ ಅವರನ್ನ 21-11, 21-12 ನೇರ ಗೇಮ್ಗಳಲ್ಲಿ ಸೋಲಿಸುವ ಮೂಲಕ ಪದಕ ಖಚಿತಪಡಿಸಿಕೊಂಡಿತು.
ಅಂದ್ಹಾಗೆ, ಸಾತ್ವಿಕ್ ಮತ್ತು ಚಿರಾಗ್ ಈ ಮೆಗಾ ಈವೆಂಟ್ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನ ಗೆದ್ದರು. ದಿನೇಶ್ ಖನ್ನಾ ಚಿನ್ನದ ಪದಕ ಗೆದ್ದ ಹೊರತಾಗಿ, 1962 ರಿಂದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್‌ನಲ್ಲಿ ಭಾರತವು ವಿವಿಧ ವಿಭಾಗಗಳಲ್ಲಿ 17 ಕಂಚಿನ ಪದಕಗಳನ್ನ ಗೆದ್ದಿದೆ.

ಟೋಕಿಯೊದಲ್ಲಿ ನಡೆದ 2022 ರ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾತ್ವಿಕ್ ಮತ್ತು ಚಿರಾಗ್, ಏಷ್ಯನ್ ಟೀಮ್ ಚಾಂಪಿಯನ್ ಶಿಪ್‌ನಲ್ಲಿ (2016, 2020) ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
