ದಿನಾಂಕ : ೧೦-೦೫-೨೩, ವಾರ : ಬುಧವಾರ, ತಿಥಿ: ಪಂಚಮಿ, ನಕ್ಷತ್ರ: ಪೂರ್ವಾಷಾಢ
ಕೆಲಸದ ಸ್ಥಳದಲ್ಲಿ ಸ್ಪರ್ಧೆ ಇರಲಿದೆ. ಇತರರ ಸಲಹೆಗೆ ಇಂದು ಕಿವಿಕೊಡುವುದು ಬೇಡ. ನೀವು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಪ್ರಯೋಜನಕಾರಿಯಾಗಿದೆ. ಸಂಗಾತಿಯೊಂದಿಗೆ ಸಮಯ ಕಳೆಯಲು ಬಯಸುವಿರಿ. ರಾಮನ ನೆನೆಯಿರಿ.
ಇಂದು ನಿಮ್ಮ ಮನಸ್ಸು ಚಂಚಲತೆಯಿಂದ ಕೂಡಿರಲಿದೆ. ಹೊಸ ಕೆಲಸಗಳನ್ನು ಆರಂಭಿಸಲು ಹೋಗದಿರಿ. ಉದರ ಸಂಬಂಧಿ ವ್ಯಾಧಿ ಬರಲಿದೆ. ವ್ಯವಹಾರದಲ್ಲಿ ಸಮಸ್ಯೆ ಎದುರಾಗಲಿದೆ. ಶಿವನ ಆರಾಧಿಸಿ.

ಯುವ ಪ್ರೇಮಿಗಳಿಗೆ ಉತ್ತಮ ದಿನ. ಆರ್ಥಿಕ ಲಾಭ ಇರಲಿದೆ. ಪಾಲುದಾರಿಕೆಯಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸಕಾಲ. ಸಂಬಂಧಿಕರು ನಿಮ್ಮನ್ನು ಪ್ರೋತ್ಸಾಹಿಸುವರು. ದೇವಿಯ ನೆನೆಯಿರಿ.
ಉದ್ಯೋಗಿಗಳ ಮೇಲೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ಶತ್ರುಗಳಿಂದ ಮುಕ್ತಿ ಪಡೆಯಬಹುದು. ವ್ಯವಹಾರದಲ್ಲಿ ಲಾಭ ಇರಲಿದೆ. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ನಿಮ್ಮ ಕೆಲಸದ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನೀವು ಪ್ರಯತ್ನಿಸುತ್ತೀರಿ. ನಾಗಾರಾಧನೆ ಮಾಡಿ.
ನೀವು ಕೆಲವು ಪ್ರಮುಖ ಕೆಲಸದ ಬಗ್ಗೆ ಸ್ವಲ್ಪ ಗೊಂದಲಕ್ಕೊಳಗಾಗುತ್ತೀರಿ. ಯೋಚಿಸಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಿ. ಸಾಮಾಜಿಕ ಗೌರವ ಸಿಗಲಿದೆ. ಪ್ರೇಮ ವ್ಯವಹಾರಗಳಲ್ಲಿ ಸ್ವಲ್ಪ ಭಾವುಕರಾಗುವಿರಿ. ಪ್ರೇಮವಿವಾಹಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಚರ್ಚೆ ನಡೆಸಬೇಕಾಗುತ್ತದೆ. ಶಿವನ ಆರಾಧಿಸಿ.
ಇಂದು ಉದ್ಯಮಿಗಳಿಗೆ ವಿಶೇಷ ದಿನವಲ್ಲ. ವಿದ್ಯಾರ್ಥಿಗಳು ಏಕಾಗ್ರತೆಯ ಕೊರತೆಯಿಂದ ವಿಷಯವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಉತ್ತಮ. ನೀವು ಉನ್ನತ ಅಧಿಕಾರಿಗಳ ಸಹಾಯವನ್ನು ಪಡೆಯುವುದನ್ನು ಮುಂದುವರಿಸುತ್ತೀರಿ. ವಿಷ್ಣುವನ್ನು ನೆನೆಯಿರಿ.

ಉದ್ಯೋಗಸ್ಥರಿಗೆ ಇಂದು ಉತ್ಸಾಹವಿರಲಿದೆ. ದೊಡ್ಡ ಕಂಪನಿಯಲ್ಲಿ ಉದ್ಯೋಗವಕಾಶ ಒದಗಿ ಬರಲಿದೆ. ಯಶಸ್ಸು ಸಿಗಲಿದೆ. ಒಡಹುಟ್ಟಿದವರಿಂದ ಸಹಾಯ. ರಾಮನ ನೆನೆಯಿರಿ.
ಸಾಲ ಪಡೆದ ಹಣವನ್ನು ಹಿಂದಿರುಗಿಸುವಂತೆ ಒತ್ತಡ ಏರ್ಪಡಲಿದೆ. ಇತರರ ಜವಾಬ್ದಾರಿಯನ್ನು ನಿಮ್ಮ ಮೇಲೆ ಹಾಕಿಕೊಳ್ಳದಿದೆ. ವೈವಾಹಿಕ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಅನಾವಶ್ಯಕ ವಿಚಾರಗಳಿಂದ ದೂರವಿರಿ. ಗುರುವ ನೆನೆಯಿರಿ.
ಕಚೇರಿಯಲ್ಲಿ ಕೆಲಸದ ಒತ್ತಡವು ನಿಮ್ಮಿಂದ ದೂರವಾಗಲಿದೆ. ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ದಿನವು ವಿಶೇಷವಾಗಿ ಮಂಗಳಕರವಾಗಿದೆ. ಇಂದು ಜನರು ನಿಮ್ಮ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ. ಹೊಸ ಕಾಮಗಾರಿ ಆರಂಭಿಸಲು ಸಕಾಲ. ಗಣಪನ ನೆನೆಯಿರಿ.
ಇಂದು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುವುದು ಪ್ರಯೋಜನಕಾರಿಯಾಗಿದೆ. ನೀವು ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನೀವು ಸಾಲದ ಮೇಲೆ ಹಣವನ್ನು ನೀಡುವುದನ್ನು ತಪ್ಪಿಸಬೇಕು. ಕೆಲಸದ ಸ್ಥಳದಲ್ಲಿ ಜಗಳ ಉಂಟಾಗಬಹುದು. ತಾಳ್ಮೆ ವಹಿಸಿ. ಮಂಜುನಾಥನ ನೆನೆಯಿರಿ.

ನಿಮ್ಮ ಸಹೋದ್ಯೋಗಿಗಳು ನಿಮ್ಮ ಪ್ರಗತಿಯಿಂದ ತುಂಬಾ ಸಂತೋಷಪಡುತ್ತಾರೆ. ಇಂದು ನೀವು ನಿಮ್ಮ ಮಾತುಗಳಿಂದ ಜನರನ್ನು ಮೆಚ್ಚಿಸಲು ಸಾಧ್ಯವಾಗುತ್ತದೆ. ಕುಟುಂಬದ ಚಿಂತೆ ದೂರವಾಗುತ್ತದೆ. ಶನೈಶ್ಚರನ ನೆನೆಯಿರಿ.
ಇಂದು ನೀವು ಮನೆಯಲ್ಲಿ ಕಚೇರಿ ಕೆಲಸಗಳನ್ನು ಮಾಡಬೇಕಾಗಬಹುದು. ಸಂಗಾತಿಯೊಂದಿಗೆ ಜಗಳ ಸಾಧ್ಯತೆ. ನೀವು ತ್ವರಿತ ಪ್ರತಿಕ್ರಿಯೆಗಳನ್ನು ನೀಡುವುದನ್ನು ತಪ್ಪಿಸಬೇಕು. ರಾಯರ ಆರಾಧಿಸಿ.

