Connect with us

Hi, what are you looking for?

ಕರಾವಳಿ

ಉಡುಪಿ: ಉದ್ಯಾವರದ ಪಿತ್ರೋಡಿಯಲ್ಲಿ ಹಳೇ ಕಾಲದ ಶಿಲಾ ಶಾಸನ ಪತ್ತೆ

0

ಉಡುಪಿ : ಉದ್ಯಾವರದ ಪಿತ್ರೋಡಿಯ ಮೋಹನ್ ಸಾಲ್ಯಾನ್ ರವರ ಗದ್ದೆಯ ಪಕ್ಕದಲ್ಲಿ ಕಲಾಯಿ ಬೈಲ್‌ನ ಬಳಿ ದಟ್ಟ ಪೊದೆಯ ಬಳಿ ಹಳೇ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿದೆ.

ಈ ಶಿಲಾಶಾಸನದ ಬಗ್ಗೆ ಸ್ಥಳೀಯರಾದ ಆಟೋ ಚಾಲಕರಾದ ಉಪೇಂದ್ರ ಮೆಂಡನ್ ಅವರು ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ರವರು ಸ್ಥಳಕ್ಕೆ ಭೇಟಿನೀಡಿ ಅಲ್ಲಿಯ ಪ್ರದೇಶವನ್ನು ಶಾಸನ ಪರಿಶೀಲನೆ ನಡೆಸಿದ್ದರು. ಈ ವೇಳೆ ಶಾಸನ ಇರುವುದು ಪತ್ತೆಯಾಗಿದೆ.

ಶಾಸನದಲ್ಲಿ ಸೂರ್ಯ, ಚಂದ್ರ, ಮಧ್ಯೆ ದೊಡ್ಡ ಗಾತ್ರದ ಲಿಂಗ, ಕುಳಿತು ಕೊಂಡಿರುವ ಬಸವ ಜೊತೆಗೆ ಕೆಳಗಡೆ ಬರಹ ಇರುವುದು ಗೋಚರಿಸುತ್ತದೆ. ಎರಡು ಫೀಟು ಅಗಲ ಐದು ಫೀಟು ಎತ್ತರ ಈ ಶಾಸನ ನೆಲದಲ್ಲಿ ಹುದುಗಿ ಹೋಗಿದೆ.

ಈ ಶಾಸನದ ಪಕ್ಕದಲ್ಲಿ ಎರಡು ನಾಗಬನ ಇದೆ. ಎದುರುಗಡೆ ವಿಶಾಲವಾದ “ಪೇರಳೆ” ನಾಮಾಂಕಿತ ಡೊಡ್ಡಕೆರೆ ಇದೆ. ಪಕ್ಕದಲ್ಲಿ ದತ್ತಾತ್ರೇಯಯ ಭಜನಾ ಮಂಡಳಿಯ ವಾರ್ಷಿಕೋತ್ಸವದಂದು ಓಕುಳಿಯಾಡಿ ಈ ಪೇರಳೆ ಕೆರೆಯಲ್ಲಿ ಸ್ನಾನ ಮಾಡುವುದು ವಾಡಿಕೆ. ನಾಗಬನದಲ್ಲಿ ಸೌರಮಾನ ಯುಗಾದಿಯಂದು ಸ್ಥಳೀಯರು ಬಂದು ಪೂಜೆ ಮಾಡುತ್ತಾರೆ.

ಈ ಭಾಗದಲ್ಲಿ ಶಾಸನ ಇರೋ ಬಗ್ಗೆ ಸ್ಥಳೀಯರಿಗೆ ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ ಎಂದು ತಿಳಿದುಬಂದಿದೆ. ಸಂಶೋದಕರಿಗೆ ಮಾಹಿತಿ ನೀಡಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

2 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

2 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

2 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!