ದಿನಾಂಕ : ೧೫-೦೫-೨೩, ವಾರ : ಸೋಮವಾರ, ತಿಥಿ: ಏಕಾದಶಿ, ನಕ್ಷತ್ರ: ಪೂರ್ವಭಾದ್ರ
ಆರೋಗ್ಯ ಸುಧಾರಿಸಲಿದೆ. ಶತ್ರುಗಳಿಂದ ಮುಕ್ತಿ ಸಿಗಲಿದೆ. ಉದ್ಯೋಗಸ್ಥರಿಗೆ ಇಂದು ಉತ್ತಮ ದಿನ. ಅನಗತ್ಯ ವೆಚ್ಚಗಳನ್ನು ತಪ್ಪಿಸಿ. ನಿಮ್ಮ ದಿನಚರಿಯನ್ನು ಆಯೋಜಿಸಿ. ಶಾಂತಚಿತ್ತರಾಗಿರುತ್ತೀರಿ. ದೇವಿಯ ನೆನೆಯಿರಿ.
ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸ್ನೇಹಿತರೊಂದಿಗೆ ಮೋಜಿನ ದಿನ. ನೀವು ಇಂದು ಸ್ಥಗಿತಗೊಂಡ ಹಣವನ್ನು ಪಡೆಯಬಹುದು. ಇಂದು ನಿಮ್ಮ ಪಾಲಿಗೆ ಸಂತೋಷದಾಯಕ ದಿನ. ಶಿವನ ಆರಾಧಿಸಿ.

ನಿಮಗೆ ಸಾಮಾಜಿಕ ಗೌರವ ಪ್ರಾಪ್ತಿಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಹೊಸ ಯೋಜನೆಗಳನ್ನು ಜಾರಿಗೆ ತರಲು ಸಕಾಲ. ಕುಟುಂಬದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಲಿದೆ. ನಾಗಾರಾಧನೆ ಮಾಡಿ.
ಕಚೇರಿ ಕೆಲಸಗಳಲ್ಲಿ ಉತ್ತಮ. ಯಾರೊಂದಿಗೂ ಪರಸ್ಪರ ಸಂಬಂಧಗಳು ಹದಗೆಡಲು ಬಿಡಬೇಡಿ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇತರರ ಸಮಸ್ಯೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ವಿಷ್ಣುವನ್ನು ನೆನೆಯಿರಿ.
ಬದಲಾಗುತ್ತಿರುವ ಹವಾಮಾನದಿಂದಾಗಿ ಆರೋಗ್ಯ ಹದಗೆಡಲಿದೆ. ಹಣಕಾಸು ವಿಚಾರದಲ್ಲಿ ಕಾಳಜಿ ಅಗತ್ಯ. ಯಂತ್ರೋಪಕರಣಗಳನ್ನು ಎಚ್ಚರಿಕೆಯಿಂದ ಬಳಸಿ. ಆರೋಗ್ಯದ ಕಾಳಜಿ ವಹಿಸಿ. ರಾಮನ ನೆನೆಯಿರಿ.
ನೀವು ಯಾರನ್ನೂ ಸಂಪೂರ್ಣವಾಗಿ ನಂಬದಿರುವುದು ಉತ್ತಮ. ವಿವಾಹೇತರ ಸಂಬಂಧಗಳಿಂದ ತೊಂದರೆ ಅನುಭವಿಸುವಿರಿ. ಬೇರೆಯವರ ವಿಚಾರಗಳಿಂದ ದೂರವಿರಿ. ಅನಾರೋಗ್ಯ ಸಾಧ್ಯತೆ. ಶನೈಶ್ಚರನ ನೆನೆಯಿರಿ.

ನಿಮ್ಮ ಕೆಲಸ ಅಥವಾ ಉದ್ಯೋಗದ ಬಗ್ಗೆ ನೀವು ದೊಡ್ಡ ಯೋಜನೆಯನ್ನು ಮಾಡಬಹುದು. ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.
ನೀವು ನಂಬಿರುವವರೇ ನಿಮಗೆ ಮೋಸ ಮಾಡಬಹುದು. ಅದಕ್ಕೇ ಹುಷಾರಾಗಿರಿ.ಹಣಕಾಸು ತೊಂದರೆ ನಿವಾರಿಸಿಕೊಳ್ಳಿ. ನಿಮ್ಮ ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವಿರಿ. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ಸಾಮರಸ್ಯ. ವ್ಯಾಪಾರ ಒಪ್ಪಂದಗಳಿಂದ ನೀವು ಲಾಭ ಸಿಗಲಿದೆ. ಬಂಧುಗಳಿಂದ ಶುಭ ಸುದ್ದಿ ಸಿಗಲಿದೆ. ಕೆಲಾದ ವಿಚಾರದಲ್ಲಿ ಮುನ್ನಡೆ. ಗುರುವ ನೆನೆಯಿರಿ.
ನಿಮ್ಮ ಕಾರ್ಯಕ್ಷಮತೆಯಿಂದ ಮೇಲಾಧಿಕಾರಿಗಳು ತುಂಬಾ ಸಂತೋಷಪಡುತ್ತಾರೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಸ್ಥಗಿತಗೊಂಡ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ರಾಯರ ಆರಾಧಿಸಿ.

ಅತಿಯಾದ ಆಲೋಚನೆಗಳಿಂದಾಗಿ ಕೆಲವು ಗೊಂದಲಗಳು ಉಂಟಾಗಬಹುದು. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ನಿರ್ಲಕ್ಷ್ಯ ತೋರದಿರಿ. ಮೇಲಾಧಿಕಾರಿಯಿಂದ ತೊಂದರೆ. ಗಣಪನ ನೆನೆಯಿರಿ.
ಕಚೇರಿ ಸಹೋದ್ಯೋಗಿಗಳು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ. ಸಂಗಾತಿಯೊಂದಿಗೆ ಮಾಧುರ್ಯ ಹೆಚ್ಚಾಗುತ್ತದೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ವಿವಾದಗಳು ಸುಳಿಯಲಿವೆ. ಪ್ರೇಮ ಸಂಬಂಧಗಳಿಗೆ ಸಂಬಂಧಿಸಿದಂತೆ ತಾಳ್ಮೆ ಮತ್ತು ಸಂಯಮ ಅಗತ್ಯ. ಮಂಜುನಾಥನ ನೆನೆಯಿರಿ.

