ದಿನಾಂಕ : ೧೬-೦೫-೨೩, ವಾರ : ಮಂಗಳವಾರ, ತಿಥಿ: ದ್ವಾದಶೀ, ನಕ್ಷತ್ರ: ಉತ್ತರಾಬಾಧ್ರ
ನಿಮ್ಮ ಸಂಗಾತಿಯ ನಡವಳಿಕೆ ನಿಮಗೆ ಸಂತೋಷ ನೀಡಲಿದೆ. ಪೂರ್ವಿಕರ ಆಸ್ತಿಯಿಂದ ಲಾಭ ಸಿಗಲಿದೆ. ಎಲ್ಲಾ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳಲಿವೆ. ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಮಾಡಲು ಸಕಾಲ. ದೇವಿಯ ನೆನೆಯಿರಿ.
ಹೊಸ ಕೆಲಸಗಳಿಂದ ಲಾಭ ಸಿಗಲಿದೆ. ಮನದಾಳದ ಮಾತುಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಸೋಮಾರಿತನದಿಂದಾಗಿ ಕೆಲಸವು ಪರಿಣಾಮ ಬೀರಬಹುದು. ಶಿವನ ಆರಾಧಿಸಿ.

ಕಾರ್ಯನಿರತ ದಿನವಾಗಿರಲಿದೆ. ಅಧಿಕ ಕೆಲಸದೊತ್ತಡ ಅನುಭವಿಸುವಿರಿ. ಆಸ್ತಿಗೆ ಸಂಬಂಧಿಸಿದ ಕೆಲಸಗಳು ಇಂದು ನಡೆಯಲಿವೆ. ಮಕ್ಕಳ ಬಗ್ಗೆ ಸ್ವಲ್ಪ ಚಿಂತೆ ಕಾಡಲಿದೆ. ಕೋಪ ಮತ್ತು ಆತುರ ಬೇಡ. ರಾಮನ ನೆನೆಯಿರಿ.
ಇಂದು ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ದಿನವಲ್ಲ. ನಿಮ್ಮ ತಪ್ಪುಗಳಿಂದ ತೊಂದರೆ ಅನುಭವಿಸಬೇಕಾದೀತು. ಎಚ್ಚರವಿರಲಿ. ನಾಗಾರಾಧನೆ ಮಾಡಿ.
ಉದ್ಯೋಗದ ವಿಚಾರವಾಗಿ ಚಿಂತೆ ಮಾಡುವಿರಿ. ವಿದೇಶ ಪ್ರಯಾಣ ಯೋಗ. ಮೇಲಾಧಿಕಾರಿಗಳೊಂದಿಗೆ ಸಾಮರಸ್ಯ ಸಾಧಿಸಿ. ರಾಮನ ನೆನೆಯಿರಿ.
ನಿಮಗೆ ಸ್ವಲ್ಪ ಸವಾಲಿನ ದಿನ. ಸ್ವಲ್ಪ ಹಣದ ಲಾಭಕ್ಕಾಗಿ ಯಾವುದೇ ತಪ್ಪು ಕೆಲಸ ಮಾಡಲು ಹೋಗದಿರಿ. ನಿಮ್ಮ ಆರ್ಥಿಕ ಸ್ಥಿತಿ ಹದಗೆಡಲಿದೆ. ಇಂದು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ. ವಿಷ್ಣುವನ್ನು ನೆನೆಯಿರಿ.

ನಿಮ್ಮ ಮಾತುಗಳನ್ನು ನಿಯಂತ್ರಿಸಿಕೊಳ್ಳಿ. ತಪ್ಪು ಕೆಲಸಗಳ ಕಡೆಗೆ ನಿಮ್ಮ ಒಲವು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೊಸ ವ್ಯವಹಾರಗಳನ್ನು ಮಾಡುವಾಗ ನೀವು ಜಾಗರೂಕರಾಗಿರಬೇಕು. ಶನೈಶ್ಚರನ ನೆನೆಯಿರಿ.
ಮನೆಗಾಗಿ ಅಲಂಕಾರಿಕ ವಸ್ತು ಖರೀದಿಸುವಿರಿ. ವೈವಾಹಿಕ ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಮಂಜುನಾಥನ ನೆನೆಯಿರಿ.
ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುವಿರಿ. ಹಣಕಾಸು ಸಂಬಂಧಿಸಿದ ಸಮಸ್ಯೆಗಳು ದೂರವಾಗಲಿವೆ. ಧಾರ್ಮಿಕ ಕಾರ್ಯದಲ್ಲಿ ನಿಮ್ಮ ನಂಬಿಕೆ ಬಲವಾಗಿರುತ್ತದೆ. ಉತ್ತಮ ಉದ್ಯೋಗವಕಾಶ ಒದಗಿ ಬರಲಿದೆ. ರಾಯರ ಆರಾಧಿಸಿ.
ಅನುಪಯುಕ್ತ ವಸ್ತುಗಳತ್ತ ಗಮನ ಹರಿಸುವುದು ಬೇಡ. ಕಚೇರಿಯಲ್ಲಿ ನಿಮ್ಮ ಬಗ್ಗೆ ಟೀಕೆ ವ್ಯಕ್ತವಾಗಲಿದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಈ ದಿನ ಉತ್ತಮವಲ್ಲ. ಗುರುವ ನೆನೆಯಿರಿ.

ಹಣದ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ. ವಿದೇಶ ಪ್ರಯಾಣ ಯೋಗ ಇರಲಿದೆ. ನಿಮ್ಮ ಸೌಮ್ಯ ನಡವಳಿಕೆಯು ಇತರರನ್ನು ಆಕರ್ಷಿಸುತ್ತದೆ. ಉದರ ಸಂಬಂಧಿ ಬೇನೆ ಬರುವ ಸಾಧ್ಯತೆ ಇದೆ. ಶಿವನ ಆರಾಧಿಸಿ.
ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ಹೋಗದಿರುವುರು ಉತ್ತಮ. ನಿಮ್ಮ ಅನುಮಾನದ ಪ್ರವೃತ್ತಿ ಬಿಟ್ಟರೆ ಉತ್ತಮ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಆಯಾಸ ಹೆಚ್ಚಲಿದೆ. ಗಣಪನ ನೆನೆಯಿರಿ.

