ದಿನಾಂಕ : ೦೫-೦೫-೨೩, ವಾರ : ಶುಕ್ರವಾರ, ತಿಥಿ: ಹುಣ್ಣಿಮೆ, ನಕ್ಷತ್ರ: ಸ್ವಾತಿ
ಹೊಸ ಆಸ್ತಿಯನ್ನು ಖರೀದಿಸಲು ಸಕಾಲ. ನಿಮ್ಮ ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಆರೋಗ್ಯ ಕ್ರಮ ಬದಲಿಸಿ. ಉದ್ಯೋಗದಲ್ಲಿ ಉದ್ವಿಗ್ನತೆ ಇರಲಿದೆ. ಶಾಂತಚಿತ್ತರಾಗಿರಿ. ದೇವಿಯ ನೆನೆಯಿರಿ.
ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ. ಹಣಕಾಸು ಖರ್ಚು ಇರಲಿದೆ. ಶಿವನ ಆರಾಧಿಸಿ.

ನಿಮಗೆ ಅಧಿಕ ವೆಚ್ಚಗಳು ತಲೆದೋರಲಿವೆ. ಮನೆಗೆ ಅತಿಥಿಗಳ ಆಗಮನ. ಪತಿ-ಪತ್ನಿಯರ ನಡುವೆ ಕಲಹ ಸಾಧ್ಯತೆ. ಅನಗತ್ಯ ಪ್ರಯಣ. ನಾಗಾರಾಧನೆ ಮಾಡಿ.
ನಿಮ್ಮ ಮಾತುಗಳನ್ನು ಕುಟುಂಬ ಸದಸ್ಯರು ಬೆಂಬಲಿಸುತ್ತಾರೆ. ಕೆಲಸದ ವಿಚಾರದಲ್ಲಿ ಒತ್ತಡ ಇರಲಿದೆ. ಸಹೋದ್ಯೋಗಿಗಳಿಂದ ತೊಂದರೆ. ಸ್ನೇಹಿತರೊಂದಿಗೆ ಸಮಯ ಕಳೆಯಲು ಇಷ್ಟಪಡುವಿರಿ. ರಾಮನ ನೆನೆಯಿರಿ.
ಸರ್ಕಾರಿ ಕೆಲಸ ಮಾಡುವವರ ಮೇಲೆ ಕೆಲಸ ಒತ್ತಡ ಕಡಿಮೆಯಿರಲಿದೆ. ಅಂದುಕೊಂಡ ಆಸೆಗಳು ನೆರವೇರಲಿವೆ. ಹೊಸ ಕಾರ್ಯಗಳನ್ನು ಮಾಡುವಾಗ ಉತ್ಸಾಹ ಇರಲಿದೆ. ಆದರೆ ಒಂದೇ ಬಾರಿಗೆ ಹಲವಾರು ಕೆಲಸಗಳನ್ನು ಮಾಡಲು ಪ್ರಯತ್ನಿಸಬೇಡಿ. ಮಂಜುನಾಥನ ನೆನೆಯಿರಿ.
ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರಲಿದೆ. ಹಳೆಯ ಜಗಳಗಳನ್ನು ಕೆದಕುವುದು ಬೇಡ. ಕಳೆದುಹೋದ ವಸ್ತುವನ್ನು ನೀವು ಇಂದು ಮರಳಿ ಪಡೆಯಬಹುದು. ಹೊಸ ಯೋಜನೆಗಳನ್ನು ಆರಂಭಿಸಲು ಸಕಾಲ. ಶಿವನ ಆರಾಧಿಸಿ.

ನೀವು ಇಷ್ಟು ದಿನ ಅನುಭವಿಸಿದ ಸಮಸ್ಯೆಗೆ ಮುಕ್ತಿ ಸಿಗಲಿದೆ. ತಾಳ್ಮೆಯಿಂದ ಕೆಲಸವನ್ನು ಪೂರ್ಣಗೊಳಿಸಿ. ಸಂಗಾತಿಯ ಸಹಕಾರ ಸಿಗಲಿದೆ. ವೃತ್ತಿ ಜೀವನದಲ್ಲಿ ಹೊಸ ತಿರುವು ಸಿಗಬಹುದು. ರಾಮನ ನೆನೆಯಿರಿ.
ಉನ್ನತ ಅಧಿಕಾರಿಗಳಿಂದ ಅಸಮಾಧಾನವನ್ನು ಎದುರಿಸಬೇಕಾದೀತು. ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಮನೆಯ ಸದಸ್ಯರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ. ಶನೈಶ್ಚರನ ನೆನೆಯಿರಿ.
ಅಮೂಲ್ಯ ವಸ್ತುಗಳ ಕುರಿತು ಜಾಗೃತೆ ವಹಿಸಿ. ಆಸ್ತಿ ವಿಚಾರದಲ್ಲಿ ವಿವಾದ ಸಾಧ್ಯತೆ. ಕೋಪ ಮತ್ತು ಕಿರಿಕಿರಿಯು ಸ್ವಭಾವತಃ ಹೆಚ್ಚಾಗಿರುತ್ತದೆ. ಉನ್ನತಾಧಿಕಾರಿಗಳೊಂದಿಗೆ ಮನಸ್ತಾಪ. ವಿಷ್ಣುವನ್ನು ನೆನೆಯಿರಿ.
ಉದ್ಯೋಗದಲ್ಲಿರುವವರು ಉನ್ನತ ಸ್ಥಾನವನ್ನು ಪಡೆಯುವಿರಿ. ಸ್ವಲ್ಪ ಪ್ರಯತ್ನದಿಂದ ನಿಮ್ಮ ಕೆಲಸ ಯಶಸ್ವಿಯಾಗುತ್ತದೆ. ವ್ಯಾಪಾರಿಗಳಿಗೆ ದೈನಂದಿನ ಆದಾಯ ಹೆಚ್ಚಾಗುತ್ತದೆ. ರಾಯರ ಆರಾಧಿಸಿ.

ಸಂಗಾತಿಯೊಂದಿಗಿನ ಹೊಂದಾಣಿಕೆಯು ತುಂಬಾ ಉತ್ತಮವಾಗಿರಲಿದೆ. ಪೋಷಕರೊಂದಿಗೆ ನಿಮ್ಮ ನಡವಳಿಕೆಯನ್ನು ಉತ್ತಮವಾಗಿ ಇರಿಸಿ. ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳನ್ನು ಕಾಣಬಹುದು. ಗುರುವ ನೆನೆಯಿರಿ.
ಮನಸ್ಸಿನ ಏಕಾಗ್ರತೆ ಕಾಯ್ದುಕೊಳ್ಳಿ. ಪ್ರೀತಿಪಾತ್ರರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದು ಉತ್ತಮ. ಸಂಗಾತಿಯೊಂದಿಗೆ ಸಾಮರಸ್ಯ ಇರಲಿ. ಗಣಪನ ನೆನೆಯಿರಿ.

