Connect with us

Hi, what are you looking for?

ಕರಾವಳಿ

ಕುಂದಾಪುರ : ಈಜಲು ತೆರಳಿದ ಬಾಲಕನನ್ನು ರಕ್ಷಿಸಲು ಹೋಗಿ ಶಿಕ್ಷಕನೂ ನೀರು ಪಾಲು

2

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಮದಗದಲ್ಲಿ ಈಜಲು ತೆರಳಿದ ಇಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಂದಾವರ ಗ್ರಾಮದ ಡಂಪಿಂಗ್ ಯಾರ್ಡ್ ಸಮೀಪದ ಬೊಬ್ಬರ್ಯನಕೊಡ್ಲು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ‌.

ಭರತ್ ಶೆಟ್ಟಿಗಾರ್ (16) ಹಾಗೂ ರಾಜೇಂದ್ರ ಶೆಟ್ಟಿಗಾರ್ (27) ಮೃತಪಟ್ಟವರು.

Advertisement. Scroll to continue reading.

ನಿನ್ನೆ ಸಂಜೆ ಬೊಬ್ಬರ್ಯನಕೊಡ್ಲು ಮದಗದಲ್ಲಿ ರಾಜೇಂದ್ರ, ಭರತ್ ಹಾಗೂ ಇನ್ನು ಮೂವರು ಬಾಲಕರು ಈಜಲು ನೀರಿಗಿಳಿದಿದ್ದಾರೆ. ಈ ವೇಳೆ ನಾಲ್ವರು ನೀರಲ್ಲಿ ಮುಳುಗುತ್ತಿದ್ದುದನ್ನು ಕಂಡ ರಾಜೇಂದ್ರ ಅವರು ಮೂವರನ್ನು ರಕ್ಷಿಸಿದ್ದು, ಆದರೆ ಭರತ್ ನನ್ನು ರಕ್ಷಿಸುವಷ್ಟರಲ್ಲಿ ತಾನು ಸಹ ಈಜಲು ಸಾಧ್ಯವಾಗದೇ ಸಾವನ್ನಪ್ಪಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಶಂಕರನಾರಾಯಣ ಸಮೀಪದ ನಿವಾಸಿ ಗಣೇಶ್ ಶೆಟ್ಟಿಗಾರ್ ಅವರ ಪುತ್ರ ಭರತ್ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದು, ಅಜ್ಜಿಮನೆಗೆ ಬಂದಿದ್ದ. ರಾಜೇಂದ್ರ ಅವರು ಶಂಕರನಾರಾಯಣದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಕುಂದಾಪುರ ಅಗ್ನಿ ಶಾಮಕ ದಳದ ಸಿಬಂದಿ ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲಕ್ಕೆತ್ತುವಲ್ಲಿ ಸಹಕರಿಸಿದರು.

ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಬೆಳ್ತಂಗಡಿ: ಮನೆಯ ಸಮೀಪದಲ್ಲಿದ್ದ ಮರವನ್ನು ಕಡಿಯುವ ವೇಳೆ ಆಕಸ್ಮಿಕವಾಗಿ ಮೈ ಮೇಲೆ ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ...

Uncategorized

0 ಬ್ರಹ್ಮಾವರ : ವಿಷ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುದಿಗ್ರಾಮದ ಬೈದ ಬೆಟ್ಟು ಎಂಬಲ್ಲಿ ನಡೆದಿದೆ. ಚಂದ್ರ(39) ಆತ್ಮಹತ್ಯೆ ಮಾಡಿಕೊಂಡವರು. ಚಂದ್ರ ಕಳೆದ 4 ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು....

ರಾಜ್ಯ

2 ಸಾಗರ:  ಜೋಗ್ ಫಾಲ್ಸ್ ಪ್ರವಾಸಕ್ಕೆ ಭಾನುವಾರ ತೆರಳಿದ್ದ ಸಾಗರದ ಇಬ್ಬರು ಜೋಗದ ಸಮೀಪದ ದೇವಿಗುಂಡಿ ಬಳಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಸಾಗರದ ಕೃಷಿ ಇಲಾಖೆಯ ಅಧಿಕಾರಿ ಕೆ.ಟಿ. ಕೃಷ್ಣಕುಮಾರ್(36)...

ರಾಷ್ಟ್ರೀಯ

1 ರಾಂಚಿ: ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ಜಾರ್ಖಂಡ್‌ನಲ್ಲಿ ವರದಿಯಾಗಿದೆ. ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಸ್ಥಳೀಯ ಫುಟ್‌ಬಾಲ್ ಪಂದ್ಯದ ಆಟದ ಮೈದಾನಕ್ಕೆ ಸಿಡಿಲು ಬಡಿದಿದೆ. ಪರಿಣಾಮ ಇಬ್ಬರು ಪ್ರೇಕ್ಷಕರು...