ಕುಂದಾಪುರ : ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆರಾಡಿ ಗ್ರಾಮದಲ್ಲಿ ನಡೆದಿದೆ.
ಶಶಿಕಾಂತ (25) ಆತ್ಮಹತ್ಯೆ ಮಾಡಿಕೊಂಡವರು.
ಅಮರ ಶೆಟ್ಟಿ ಎಂಬವರು ನಿನ್ನೆ ಸಂಜೆ ಕೆರಾಡಿಯಿಂದ ಚಿತ್ತೂರು ಕಡೆಗೆ ಹೋಗುತ್ತಿರುವಾಗ ಕೆರಾಡಿ ಗ್ರಾಮದ ಚಪ್ಪರಮಕ್ಕಿ ಕೂರ್ಕೊಗೆ ಎಂಬಲ್ಲಿ ನಿರ್ಜನ ಪ್ರದೇಶದ ರಸ್ತೆ ಬದಿಯಲ್ಲಿ ಅವರ ಸ್ನೇಹಿತ ಶಶಿಕಾಂತ ಅವರ ಬೈಕ್ ನಿಂತಿರುವುದು ಗಮನಕ್ಕೆ ಬಂದಿದೆ.
Advertisement. Scroll to continue reading.

ಅವರು ಶಶಿಕಾಂತನ ಮೊಬೈಲ್‌ಗೆ ಕರೆ ಮಾಡಿದ್ದು, ಆತ ಸ್ವೀಕರಸದ್ದಿದಾಗ ಇನ್ನುಳಿದ ಸ್ನೇಹಿತರಿಗೆ ಕರೆಮಾಡಿ ವಿಚಾರ ತಿಳಿಸಿ ಎಲ್ಲರೂ ಸೇರಿ ಆಭಯಾರಣ್ಯದಲ್ಲಿ ಹುಡುಕುತ್ತಿರುವಾಗ ಶಶಿಕಾಂತನು ಒಂದು ಚಾಕಟೆ ಮರಕ್ಕೆ ಸುತ್ತಿಕೊಂಡಿರುವ ಕುಮ್ಟಿ ಬೀಳಿಗೆ ಪಾಲ್ಸ್ ನ ಬೀಳನ್ನು ಕಟ್ಟಿಕೊಂಡು ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, Featured, kerady, Sucide

Click to comment