Connect with us

Hi, what are you looking for?

Diksoochi News

Uncategorized

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

0

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದೆ. ಅಕಾಡೆಮಿಯ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಇಂದು ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತ ಕೃತಿಗಳನ್ನು ಪ್ರಕಟಿಸಿದ್ದಾರೆ.

5 ಜನ ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರೊ.ಅಮೃತ ಸೋಮೇಶ್ವರ, ವಿದ್ವಾನ್. ಷಣ್ಮುಖಯ್ಯ ಅಕ್ಯೂರಮಠ, ಡಾ.ಕೆ.ಕೆಂಪೇಗೌಡ, ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಶ್ರೀ ಅಶೋಕಪುರಂ ಕೆ. ಗೋವಿಂದರಾಜು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ಐವತ್ತು ಸಾವಿರ ರೂ. ನಗದು, ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು :
ಶ್ರೀ ಪ್ರೇಮಶೇಖರ್, ಡಾ.ರಾಜಪ್ಪ ದಳವಾಯಿ, ಶ್ರೀಮತಿ ಬಿ.ಟಿ.ಜಾಹ್ನವಿ, ಪ್ರೊ.ಕಲ್ಯಾಣರಾವ್ ಜಿ.ಪಾಟೀಲ್, ಡಾ.ಜೆ.ಪಿ.ದೊಡ್ಡಮನಿ, ಡಾ.ಮೃತ್ಯುಂಜಯ ರುಮಾಲೆ, ಶ್ರೀ ಡಿ.ವಿ.ಪ್ರಹ್ಲಾದ್, ಡಾ.ಎಂ.ಎಸ್.ಆಶಾದೇವಿ, ಶ್ರೀ ಶಿವಾನಂದ ಕಳವೆ, ಶ್ರೀಮತಿ ವೀಣಾ ಬನ್ನಂಜೆ.
ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ.ನಗದು, ಪ್ರಮಾಣಪತ್ರವನ್ನು ಒಳಗೊಂಡಿದೆ.

Advertisement. Scroll to continue reading.

2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು :
ಸತ್ಯಮಂಗಲ ಮಹಾದೇವ- ಪಂಚವರ್ಣದ ಹಂಸ(ಕಾವ್ಯ), ಸುಮಿತ್ ಮೇತ್ರಿ – ಥಟ್ ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ (ನವಕವಿಗಳ ಪ್ರಥಮ ಸಂಕಲನ), ವಸುದೇಂದ್ರ-ತೇಜೋತುಂಗಭದ್ರಾ(ಕಾದಂಬರಿ), ಲಕ್ಷ್ಮಣ ಬಾದಾಮಿ – ಒಂದು ಚಿಟಿಕೆ ಮಣ್ಣು(ಸಣ್ಣಕತೆ),
ಉಷಾ ನರಸಿಂಹನ್ ರ ಕಂಚುಗನ್ನಡಿ , (ನಾಟಕ),ರಘುನಾಥ ಚಹಾ-ಬೆಳ್ಳಿ ತೊರೆ(ಲಲಿತ ಪ್ರಬಂಧ), ಡಿ.ಜಿ.ಮಲ್ಲಿಕಾರ್ಜುನ – ಯೋರ್ದಾನ್ ಪಿರೆಮನ್(ಪ್ರವಾಸ ಸಾಹಿತ್ಯ), ಬಿ.ಎಂ.ರೋಹಿಣಿ-ನಾಗಂದಿಯೊಳಗಿಂದ(ಜೀವನಚರಿತ್ರೆ/ಆತ್ಮಕಥೆ), ಡಾ.ಗುರುಪಾದ ಮರಿಗುದ್ದಿ – ಪೊದೆಯಿಂದಿಳಿದ ಎದೆಯ ಹಕ್ಕಿ(ಸಾಹಿತ್ಯ ವಿಮರ್ಶೆ), ವಸುಮತಿ ಉಡುಪ – ಅಭಿಜಿತನ ಕತೆಗಳು(ಮಕ್ಕಳ ಸಾಹಿತ್ಯ), ಡಾ.ಕೆ.ಎಸ್.ಪವಿತ್ರ – ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು(ವಿಜ್ಞಾನ ಸಾಹಿತ್ಯ), ಡಾ.ಮಹಬಲೇಶ್ವರ ರಾವ್ – ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು (ಮಾನವಿಕ), ಡಾ.ಚನ್ನಬಸವಯ್ಯ ಹಿರೇಮಠ-ಅನಾವರಣ(ಸಂಶೋಧನೆ), ಗೀತಾ ಶೆಣೈ-ಕಾಳಿಗಂಗಾ (ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ), ಧರಣೇಂದ್ರ ಕುರಕುರಿ-ಜ್ವಾಲಾಮುಖಿ ಪರ್(ಕನ್ನಡದಿಂದ ಭಾರತೀಯ ಭಾಷೆಗೆ ಅನುವಾದ), ಸುಧಾ ಆಡುಕಳ -ಬಕುಳದ ಬಾಗಿಲಿನಿಂದ(ಅಂಕಣ ಬರಹ/ವೈಚಾರಿಕ ಬರಹ), ಪ್ರೊ.ಡಿ.ವಿ.ಪರಮಶಿವಮೂರ್ತಿ, ಡಿ.ಸಿದ್ಧಗಂಗಯ್ಯ – ನೊಳಂಬರ ಶಾಸನಗಳು (ಸಂಕೀರ್ಣ), ಕಪಿಲ ಪಿ.ಹುಮನಾಬಾದೆ – ಹಾಣಾದಿ(ಲೇಖಕರ ಮೊದಲ ಸ್ವತಂತ್ರ ಕೃತಿ)

ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ. ಬಹುಮಾನ ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.


ದತ್ತಿ ಬಹುಮಾನ ಪುರಸ್ಕೃತರು :
ಅನುಪಮಾ ಪ್ರಸಾದ್ – ಪಕ್ಕಿ ಹಳ್ಳದ ಹಾದಿಗುಂಟ(ಕಾದಂಬರಿ-ಚದುರಂಗ ದತ್ತಿನಿಧಿ ಬಹುಮಾನ), ನೀತಾ ರಾವ್ – ಹತ್ತನೇ ಕ್ಲಾಸಿನ ಹುಡುಗಿಯರು(ಲಲಿತ ಪ್ರಬಂಧ-ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ), ಡಾ. ಬಿ. ಪ್ರಭಾಕರ ಶಿಶಿಲ – ಬೊಗಸೆ ತುಂಬಾ ಕನಸು(ಜೀವನ ಚರಿತ್ರೆ- ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ), ಡಾ.ಎಂ.ಉಷಾ-ಕನ್ನಡ ಮ್ಯಾಕ್ ಬೆತ್ ಗಳು(ಸಾಹಿತ್ಯ ವಿಮರ್ಶೆ-ಪಿ.ಶ್ರೀನಿವಾಸ ರಾವ್ ದತ್ತಿನಿಧಿ ಬಹುಮಾನ), ಜಿ.ಎನ್. ರಂಗನಾಥ ರಾವ್ – ಶ್ರೀ ಮಹಾಭಾರತ 1,2,3 ಮತ್ತು 4(ಅನುವಾದ – ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿ ನಿಧಿ ಬಹುಮಾನ), ಭಾಗ್ಯಜ್ಯೋತಿ ಹಿರೇಮಠ – ಪಾದಗಂಧ(ಲೇಖಕರ ಮೊದಲ ಸ್ವತಂತ್ರ ಕೃತಿ-ಮಧುರಚೆನ್ನ ದತ್ತಿನಿಧಿ ಬಹುಮಾನ), ಪ್ರಮೋದ್ ಮುತಾಲಿಕ್ – ಬಿಯೊಂಡ್ ಲೈಫ್ (ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ – ಅಮೆರಿಕನ್ನಡ ದತ್ತಿನಿಧಿ ಬಹುಮಾನ), ಮಲ್ಲಿಕಾರ್ಜುನ ಕಡಕೋಳ – ಯಡ್ರಾಮಿ ಸೀಮೆ ಕಥನಗಳು(ವೈಚಾರಿಕ/ಅಂಕಣಬರಹ-ಬಿ.ವಿ.ವೀರಭದ್ರಪ್ಪ ದತ್ತಿನಿಧಿ), ಲಕ್ಷ್ಮೀಕಾಂತ್ ಪಾಟೀಲ್ – ಶ್ರೀ ಪ್ರಸನ್ನವೆಂಕಟದಾಸರ್ಯಕೃತ, ಶ್ರೀ ಲಕ್ಷ್ಮೀದೇವಿ ಅಪ್ರಕಟಿತ ಸ್ತುತಿ ರತ್ನಗಳು(ದಾಸ ಸಾಹಿತ್ಯ – ಶ್ರೀಮತಿ ಜಲಜಾ ಶ್ರೀಪತಿಆಚಾರ್ಯ ಗಂಗೂರ್ ದತ್ತಿನಿಧಿ ಬಹುಮಾನ)

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ...

ರಾಷ್ಟ್ರೀಯ

0 ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿಧಾನಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್‌ ಬುಧವಾರ ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು...

ರಾಜ್ಯ

0 ಮೈಸೂರು: ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ. ಈ ಮೈತ್ರಿ ಹೊಸದೇನಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು 2014 ರಿಂದಲೇ ಅನಧಿಕೃತವಾಗಿ...

ರಾಜ್ಯ

0 ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಬ್ಬ ಗೂಂಡಾ, ರೌಡಿ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಇಂತಹವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆಂದು ಕಾಂಗ್ರೆಸ್‌ ಮುಖಂಡ ಯತೀಂದ್ರ...

ರಾಜ್ಯ

0 ಬೆಂಗಳೂರು : ಲೋಕಸಭಾ ಚುನಾವಣೆಗೆ ಕರ್ನಾಟಕದ ತನ್ನ ಪಾಲಿನ 25 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ರಾಜ್ಯದಲ್ಲಿ ಶೇ.60ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಕೊಕ್‌ ನೀಡಿ ಹೊಸಬರಿಗೆ ಕಮಲ ಪಡೆ ಮಣೆ ಹಾಕಿದೆ....

error: Content is protected !!