ದಿನಾಂಕ: ೩೧-೦೫-೨೩, ವಾರ : ಬುಧವಾರ, ನಕ್ಷತ್ರ : ಹಸ್ತ, ತಿಥಿ: ಏಕಾದಶಿ
ನಿಮಗೆ ಹೊಸ ಸ್ನೇಹಿತರು ಸಿಗಲಿದ್ದಾರೆ. ಸಂತಸದ ದಿನ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ದುರ್ಗೆಯ ನೆನೆಯಿರಿ.
ಸ್ನೇಹಿತರೊಂದಿಗೆ ವೈಯುಕ್ತಿಕ ವಿಚಾರಗಳ ಬಗ್ಗೆ ಚರ್ಚೆ ಮಾಡುವಿರಿ. ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ನಿಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ಪೂರೈಸುವಿರಿ. ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಲಕ್ಷ್ಮಿಯ ಆರಾಧಿಸಿ.

ನಿಮ್ಮ ಅತ್ತೆಯೊಂದಿಗೆ ಉತ್ತಮ ಬಾಂಧವ್ಯ ಇರಲಿ. ಕೆಲಸದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ. ನಿಮ್ಮ ವಿರೋಧಿಗಳನ್ನು ನಿರ್ಲಕ್ಷಿಸದಿರಿ. ಇದು ತುಂಬಾ ಅಗತ್ಯವಿಲ್ಲದಿದ್ದರೆ, ನಿಮ್ಮ ಮಾತುಗಳು ಮತ್ತು ಮಾಹಿತಿಯನ್ನು ಜನರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ. ಆರೋಗ್ಯದ ಕಾಳಜಿ ಅಗತ್ಯ. ಹನುಮನ ನೆನೆಯಿರಿ.
ನಿಮ್ಮ ಗುರಿಯತ್ತ ನೀವು ಗಮನ ಹರಿಸುವಿರಿ. ಆದಾಯದ ಮೂಲ ಉತ್ತಮವಾಗಿರಲಿದೆ. ಧನಾತ್ಮಕ ಯೋಚನೆ ಮಾಡುವಿರಿ. ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡುತ್ತವರ. ಹಲವು ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಲಿವೆ. ರುದ್ರಾಭಿಷೇಕ ಮಾಡಿ.
ಇಂದು ಅಧಿಕ ಕೆಲಸ ಇರಲಿದೆ. ಪ್ರಭಾವಿ ಜನರ ಸಂಪರ್ಕ ಸಾಧಿಸುವಿರಿ. ಚಿಕ್ಕ ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುವಿರಿ. ನೀವು ಬಹಳ ದಿನಗಳಿಂದ ಕಾಯುತ್ತಿದ್ದ ವಸ್ತುಗಳು ನಿಮಗೆ ದೊರೆಯುತ್ತವೆ. ರಾಮ ಜಪ ಮಾಡಿ.
ಕೆಲಸದ ವಿಚಾರದಲ್ಲಿ ಎಚ್ಚರವಿರಲಿ. ನೀವು ಯಾವುದೇ ಕೆಲಸವನ್ನು ಮಾಡುವಾಗ ಏಕಾಗ್ರತೆ ಇರಲಿ. ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ವಿಷ್ಣು ಸಹಸ್ರನಾಮ ಪಠಿಸಿ.

ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಜೀವನದ ಬಗ್ಗೆ ಚಿಂತೆ ಮಾಡುವಿರಿ. ಆರೋಗ್ಯದ ನಿರ್ಲಕ್ಷ್ಯ ಮಾಡಬೇಡಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಅಹಂಕಾರವನ್ನು ಬಿಡುವುದು ಉತ್ತಮ. ನಾಗಾರಾಧನೆ ಮಾಡಿ.
ಇಂದು ನೀವು ಅನಿರೀಕ್ಷಿತ ಪ್ರಯಾಣವನ್ನು ಮಾಡಬೇಕಾಗಬಹುದು. ನೀವು ದೂರದೃಷ್ಟಿಯ ಚಿಂತನೆ ಮಾಡುವುದು ಅಗತ್ಯ. ಇದರಿಂದ ವ್ಯಾಪಾರದಲ್ಲಿ ಲಾಭ. ಕೆಲಸದ ಸ್ಥಳದಲ್ಲಿ ಮಹಿಳಾ ಸಹೋದ್ಯೋಗಿಯೊಂದಿಗೆ ಜಗಳವಾಗಬಹುದು. ಹಣದ ವ್ಯವಹಾರದಲ್ಲಿ ಎಚ್ಚರ ವಹಿಸಿ. ಹನುಮನ ನೆನೆಯಿರಿ.
ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ದಿನವಾಗಿರಲಿದೆ. ಕೆಲಸದ ಒತ್ತಡ ನಿಮ್ಮ ಮೇಲೆ ಕಡಿಮೆ ಇರುತ್ತದೆ. ವಿವಾಹಿತ ಸಂಬಂಧಗಳಲ್ಲಿ ಮಾಧುರ್ಯ ಇರಲಿದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಹನುಮನ ನೆನೆಯಿರಿ.
ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ಆರೋಗ್ಯದ ನಿರ್ಲಕ್ಷ್ಯ ಮಾಡದಿರುವುದು ಉತ್ತಮ. ನಾಗಾರಾಧನೆ ಮಾಡಿ.

ಕೆಲಸದ ಸ್ಥಳದಲ್ಲಿ ನೀವು ಹೆಚ್ಚು ಗಮನ ನೀಡಿದರೆ ಉತ್ತಮ. ಸೋಮಾರಿತನ ಬಿಟ್ಟರೆ ಉತ್ತಮ. ಪ್ರೀತಿಯ ವಿಚಾರದಲ್ಲಿ ಸಂತಸ ಇರಲಿದೆ. ಜನರಿಗೆ ಸಹಾಯ ಮಾಡಲು ಪ್ರಯತ್ನಿಸುವಿರಿ. ನಾರಾಯಣನ ನೆನೆಯಿರಿ.
ನಿಮ್ಮ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ. ಸಹೋದರ ಸಹೋದರಿಯರಿಂದ ಸಹಾಯ ಪಡೆಯಿರಿ. ಉದ್ಯಮಿಗಳ ಆದಾಯ ಹೆಚ್ಚಲಿದೆ. ಕೆಲವು ಶುಭ ಸುದ್ದಿಗಳನ್ನು ಪಡೆಯುವ ಸಾಧ್ಯತೆ. ವ್ಯಾಪಾರ ವಿಚಾರದಲ್ಲಿ ಅಡೆತಡೆ ಬರಲಿದೆ. ಶನಿದೇವನ ನೆನೆಯಿರಿ.

