ದಿನಾಂಕ : ೦೨-೦೬-೨೩, ವಾರ : ಶುಕ್ರವಾರ, ತಿಥಿ: ತ್ರಯೋದಶಿ, ನಕ್ಷತ್ರ: ಸ್ವಾತಿ
ಕುಟುಂಬದಲ್ಲಿ ಸಂತಸದ ವಾತಾವರಣ. ಕೆಲಸದೊತ್ತಡ. ವಿಶ್ರಾಂತಿಯೂ ಅಗತ್ಯ. ಕಲಾವಿದರಿಗೆ ಉತ್ತಮ ದಿನ. ರಾಮನ ನೆನೆಯಿರಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ಕಟು ಮಾತು ಬೇಡ. ಉತ್ತಮ ಆರೋಗ್ಯ. ನಾಗಾರಾಧನೆ ಮಾಡಿ.

ಮಾತುಗಳನ್ನು ಆಡುವಾಗ ಎಚ್ಚರ ಅಗತ್ಯ. ಇತರರ ಕೆಲಸಕ್ಕೆ ಕೈ ಹಾಕದಿರಿ. ಕುಟುಂಬದ ಕಾಳಜಿ ಅಗತ್ಯ. ಶಿವನ ಆರಾಧಿಸಿ.
ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿರಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ದೇವಿಯ ನೆನೆಯಿರಿ.
ವ್ಯಾಪಾರಿಗಳಿಗೆ ಹಣಕಾಸು ಸಮಸ್ಯೆ ನಿವಾರಣೆಯಾಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಾಮರಸ್ಯ ಸಾಧಿಸಿ. ಅವಿವಾಹಿತರಿಗೆ ವಿವಾಹಯೋಗ. ವಿಷ್ಣುವನ್ನು ನೆನೆಯಿರಿ.
ನಿರುದ್ಯೋಗಿಗಳಿಗೆ ಉದ್ಯೋಗವಕಯ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಮಕ್ಕಳ ಆರೋಗ್ಯದ ಕಾಳಜಿ ವಹಿಸಿ. ರಾಮನ ನೆನೆಯಿರಿ.

ಧಾರ್ಮಿಕ ಕೆಲಸದಲ್ಲಿ ಆಸಕ್ತಿ ಇರಲಿದೆ. ಮಾನಸಿಕವಾಗಿ ಕುಗ್ಗುವಿಕೆ ತಪ್ಪಿಸಿ. ಧನಾತ್ಮಕ ಯೋಚನೆ ಇರಲಿ. ಅನಗತ್ಯ ವಿಚಾರಗಳಿಂದ ದೂರವಿರಿ. ಮಂಜುನಾಥನ ನೆನೆಯಿರಿ.
ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ವ್ಯಾಪಾರದಲ್ಲಿ ಹೆಚ್ಚಿನ ಲಾಭ. ಸ್ಪಷ್ಟ ಆಲೋಚನೆ ಇರಲಿ. ಶನೈಶ್ಚರನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಯಶಸ್ಸು. ಏಕಾಗ್ರತೆ ಇರಲಿ. ವ್ಯವಹಾರದಲ್ಲಿ ಲಾಭ ಇರಲಿದೆ. ಉತ್ಸಾಹ ಇರಲಿದೆ. ಶಿವನ ಆರಾಧಿಸಿ.
ವ್ಯಾಪಾರದ ವಿಚಾರದಲ್ಲಿ ಹಿರಿಯರ ಸಲಹೆ ಪಾಲಿಸಿ. ಹೊಸ ವ್ಯವಹಾರ ಆರಂಭಿಸಲು ಸಕಾಲ. ಮಾನಸಿಕ ನೆಮ್ಮದಿ. ಗಣಪನ ನೆನೆಯಿರಿ.

ಉಳಿತಾಯದತ್ತ ಗಮನ ಹರಿಸುವುದು ಅಗತ್ಯ. ಪ್ರಯಾಣ ಬೇಡ. ಸಣ್ಣ ಪುಟ್ಟ ವಿಷಯಗಳಿಗೆ ಕೋಪ ಬೇಡ. ತಾಳ್ಮೆ ಇರಲಿ. ರಾಯರ ಆರಾಧಿಸಿ.
ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವಿರಿ. ಆಹಾರ ಕ್ರಮದತ್ತ ಎಚ್ಚರ ವಹಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ಗುರುವ ನೆನೆಯಿರಿ.

