ದಿನಾಂಕ : ೦೩-೦೬-೨೩, ವಾರ : ಶನಿವಾರ, ತಿಥಿ: ಚತುರ್ದಶಿ, ನಕ್ಷತ್ರ: ವಿಶಾಖ
ಸಂಗಾತಿಯೊಂದಿಗೆ ಸಾಮರಸ್ಯ ಇರಲಿದೆ. ದೈಹಿಕ ಸಮಸ್ಯೆಗಳು ಎದುರಾಗಲಿದೆ. ಮನೆಯಲ್ಲಿ ಸಂಭ್ರಮ ಇರಲಿದೆ. ನೀವು ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ನಾಗಾರಾಧನೆ ಮಾಡಿ.
ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಿರಿ. ಅನಗತ್ಯ ಕೆಲಸಗಳಿಗೆ ಹಣ ವ್ಯಯವಾಗಲಿದೆ. ಜಾಗೃತೆ ಮಾಡಿ. ಅಂದುಕೊಂಡ ಕೆಲಸಕ್ಕೆ ಹಿನ್ನೆಡೆ. ಮನಸ್ಸಿನ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ರಾಮನ ನೆನೆಯಿರಿ.

ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಬಹುದು. ಹಣವನ್ನು ಸಾಲ ನೀಡುವುದನ್ನು ತಪ್ಪಿಸಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕಕ್ಕೆ ಬರುವಿರಿ. ದೇವಿಯ ನೆನೆಯಿರಿ.
ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಲಿದೆ. ಗಂಭೀರ ವಿಷಯಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತನ್ನಿ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಲಿವೆ. ಹಣಕಾಸಿನ ಲಾಭ ಇರಲಿದೆ. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ವಿದ್ಯಾರ್ಥಿಗಳಿಗೆ ಶುಭಫಲ. ಮನೆಯಲ್ಲಿ ಮಂಗಳಕಾರ್ಯ ನಡೆಯಲಿದೆ. ಆರೋಗ್ಯದ ಕಾಳಜಿ ವಹಿಸಿ. ಕೆಲಸದಲ್ಲಿ ಯಶಸ್ಸು. ನೀವು ವ್ಯಾಪಾರದಲ್ಲಿ ದೊಡ್ಡ ಹೂಡಿಕೆ ಮಾಡಬಹುದು. ರಾಮನ ನೆನೆಯಿರಿ.
ಒತ್ತಡದ ಕೆಲಸ ಇರಲಿದೆ. ನಿದ್ರಾಹೀನತೆಯ ಸಮಸ್ಯೆ ಎದುರಾಗಲಿದೆ. ಮನೆಯ ಯಾವುದೇ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಾನೂನು ವಿಚಾರದಲ್ಲಿ ಅಡೆ ತಡೆ ಇರಲಿದೆ. ವಿಷ್ಣುವನ್ನು ನೆನೆಯಿರಿ.

ಕೌಟುಂಬಿಕ ವಾತಾವರಣ ತುಂಬಾ ಉತ್ತಮವಾಗಿರಲಿದೆ. ಮಹಿಳೆಯರು ಆರೋಗ್ಯದ ಕಾಳಜಿ ವಹಿಸಿ. ಕೆಲಸದ ಬಗ್ಗೆ ಗಂಭೀರವಾಗಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿದರೆ ಉತ್ತಮ. ಜನ ನಿಮ್ಮ ಮಾತುಗಳಿಂದ ಪ್ರಭಾವಿತರಾಗುತ್ತಾರೆ. ಶಿವನ ಆರಾಧಿಸಿ.
ಹಳೆಯ ಭಿನ್ನಾಭಿಪ್ರಾಯಗಳು ಇತ್ಯರ್ಥವಾಗಲಿದೆ. ವ್ಯವಹಾರದಲ್ಲಿ ಲಾಭ ಇರಲಿದೆ. ರಾಜಕೀಯ ಸಂಪರ್ಕದಿಂದ ಲಾಭ. ಆಸ್ತಿ ಖರೀದಿ ಮತ್ತು ಮಾರಾಟದಿಂದಲೂ ಲಾಭ. ನಿಮ್ಮ ಬಗ್ಗೆ ಕೆಲವರು ಕೆಟ್ಟ ಪ್ರಚಾರ ಮಾಡಬಹುದು. ಮಂಜುನಾಥನ ನೆನೆಯಿರಿ.
ಇಂದು ನಿಮಗೆ ಉತ್ತಮ ದಿನ. ಉಲ್ಲಾಸ ಇರಲಿದೆ. ಸ್ಥಗಿತಗೊಂಡ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಮನೆಗೆ ಬಂಧುಗಳ ಆಗಮನವಿರಲಿದೆ. ಗಣಪನ ನೆನೆಯಿರಿ.
ಅತಿಯಾದ ಉತ್ಸಾಹದಿಂದಾಗಿ, ನಿಮ್ಮ ಕೆಲಸವು ಹಾಳಾಗಬಹುದು. ಆಹಾರ ಸೇವನೆ ವಿಚಾರದಲ್ಲಿ ಎಚ್ಚರ ಇರಲಿ. ಪತಿ-ಪತ್ನಿಯರ ನಡುವೆ ಸಾಮರಸ್ಯದ ಕೊರತೆ ಉಂಟಾಗಬಹುದು. ಮನಸ್ತಾಪ ತಪ್ಪಿಸಿ. ಶನೈಶ್ಚರನ ನೆನೆಯಿರಿ.

ಇಂದು ನೀವು ನಿಮ್ಮ ಸಹೋದ್ಯೋಗಿಗಳೊಂದಿಗೆ ಸ್ವಲ್ಪ ಎಚ್ಚರದಿಂದ ವ್ಯವಹರಿಸಿ. ಮದುವೆಗೆ ಸಂಬಂಧಿಸಿದ ವಿಚಾರದಲ್ಲಿ ಜಾಗರೂಕತೆಯ ಹೆಜ್ಜೆ ಇಡಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಮಕ್ಕಳಿಂದ ಶುಭ ಸಮಾಚಾರ ಸಿಗಲಿದೆ. ದೂರ ಪ್ರಯಾಣ ಸಾಧ್ಯತೆ. ಗುರುವ ನೆನೆಯಿರಿ.
ಇಂದು ದಿನದ ಆರಂಭವು ಉತ್ತಮವಾಗಿರದು. ವ್ಯವಹಾರದ ವಿಚಾರದಲ್ಲಿ ಎಚ್ಚರ ಇರಲಿ. ನೀವು ವಿದೇಶದಿಂದ ಉದ್ಯೋಗಾವಕಾಶ ಪಡೆಯುವಿರಿ. ಪ್ರೀತಿಪಾತ್ರರು ನಿಮಗೆ ಕೆಲವು ಉಡುಗೊರೆಗಳನ್ನು ನೀಡಬಹುದು. ರಾಯರ ಆರಾಧಿಸಿ.

