ವರದಿ: ದಿನೇಶ್ ರಾಯಪ್ಪನಮಠ
ಕುಂದಾಪುರ: ಮಹಿಳ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪಿ ಬಿಜೆಪಿ ಸಂಸದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ ಸಿಂಗ್ ನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ದೇಶವ್ಯಾಪಿ ಕಿಸಾನ್ ಸಂಯುಕ್ತ ಮೋರ್ಚಾ ನೀಡಿದ ಕರೆಯ ಮೇರೆಗೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಲಿಂಪಿಕ್ಸ್ ಹಾಗೂ ಕಾಮನ್ವೆಲ್ತ್ ಗಳಲ್ಲಿ ಸ್ಪರ್ಧಿಸಿ ಚಿನ್ನ ಹಾಗೂ ಅತ್ಯುನ್ನತ ಪ್ರಶಸ್ತಿ ಪಡೆದವರು ಇಂದು ನ್ಯಾಯಕ್ಕಾಗಿ ಬೀದಿಯಲ್ಲಿರುವುದು ದೇಶ ತಲೆತಗ್ಗಿಸುವಂತೆ ಮಾಡಿದೆ.
ಸುಮಾರು ನಲವತ್ತಕ್ಕೂ ಹೆಚ್ಚು ಗಂಭೀರ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ನ ಮೇಲೆ ಪೋಕ್ಸೋ ಕಾಯ್ದೆ ಇದ್ದರೂ ಕೇಂದ್ರ ಸರಕಾರ ರಕ್ಷಣೆ ಮಾಡುತ್ತಿರುವುದು ದೇಶದ ಕಾನೂನಿನ ಅಣಕವಾಗಿದೆ.
ನ್ಯಾಯ ಕೇಳುತ್ತಿರುವ ಪ್ರತಿಭಟನಕಾರರ ಮೇಲೆಯೇ ಪ್ರಕರಣ ದಾಖಲಿಸಿರುವುದು ಖಂಡನೀಯ.ಬಿಜೆಪಿಯ ಐಟಿ ಸೀಲ್ ನ್ಯಾಯ ಕೇಳುತ್ತಿರುವವರ ವಿರುದ್ಧ ಅಪಪ್ರಚಾರಗಳನ್ನು ಹರಿಯಬಿಟ್ಟು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಮಹಿಳೆಯರನ್ನು ಹೀನಾಯವಾಗಿ ಕಾಣುವ ಮನಸ್ಥಿತಿ ಇರುವ ಬಿಜೆಪಿ-ಆರ್ ಎಸ್ಎಸ್ “ಬೋಲೋ ಭಾರತ್ ಮಾತಾಕಿ” ಎಂದು ಘೋಷಣೆ ಕೂಗುವ ನೈತಿಕತೆ ಇಲ್ಲ.ದೇಶದಲ್ಲಿ ಮಹಿಳೆಯರ ಮೇಲೆ ಅತೀ ಹೆಚ್ಚು ದೌರ್ಜನ್ಯ ನಡೆಸಿದ ಪಕ್ಷವೆಂದರೆ ಅದು ಬಿಜೆಪಿ ಎಂಬುವುದು ಈ ವಿಚಾರದಲ್ಲಿಯೂ ಸಾಬೀತಾಗಿದೆ ಎಂದರು.
ರೈತ ಮುಖಂಡ ಚಂದ್ರಶೇಖರ ಮಾತನಾಡಿ; ಮಹಿಳೆಯರ ಮೇಲಿನ ಲೈಂಗಿಕ ಕಿರುಕಳ ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ತೀವ್ರ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದೆ ಹೋರಾಟ ಮುನ್ನೆಡೆಸೋಣ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡ ಎಚ್ ನರಸಿಂಹ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು,ರೈತ ಸಂಘ, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ಐ,ದಲಿತ ಹಕ್ಕುಗಳ ಸಮಿತಿ,ಕ್ರಷಿಕೂಲಿಕಾರರ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.ಕೆ.ಶಂಕರ್ ಮಹಾಬಲ ವಡೇರಹೋಬಳಿ, ಬಲ್ಕೀಸ್, ಶೀಲಾವತಿ, ನಾಗರತ್ನ ಕುಂದಾಪುರ, ರಾಜು ದೇವಾಡಿಗ, ರಮೇಶ್ ವಿ, ಸಂತೋಷ ಹೆಮ್ಮಾಡಿ ಇದ್ದರು.ರಮೇಶ್ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿದರು.ರಾಜೇಶ್ ವಡೇರಹೋಬಳಿ ವಂದಿಸಿದರು.
